

ಗಜೇಂದ್ರಗಡ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶುಕ್ರವಾರ ಸಂಭ್ರಮದಿಂದ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಯಿತು. ಮನೆಗಳಲ್ಲಿ ಲಕ್ಷ್ಮೀಮೂರ್ತಿ ಪ್ರತಿಷ್ಠಾಪಿಸಿ ಬಗೆಬಗೆಯ ಹೂವು ಹಾಗೂ ಆಭರಣಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಜನರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ತೆರಳಿ ದೇವಿದರ್ಶನ ಪಡೆದರು. ಮನೆಯಲ್ಲಿ ಬಗೆಬಗೆಯ ಭಕ್ಷ್ಯವನ್ನು ತಯಾರಿಸಿ ಹಬ್ಬದೂಟ ಸವಿದರು. ಹೂವು, ಹಣ್ಣುಗಳ ಬೆಲೆ ಹೆಚ್ಚಾಗಿದ್ದದರೂ ಯಾವುದನ್ನೂ ಲೆಕ್ಕಿಸದೆ ಜನರು ಹಬ್ಬವನ್ನು ಸಡಗರದಿಂದ ಆಚರಿಸಿದರು. ಸಂಜೆ ವೇಳೆ ಮನೆಯಲ್ಲಿ ಲಕ್ಷ್ಮೀಗೆ ದೀಪದಾರತಿ ಮಾಡಿ ಪೂಜೆ ಸಲ್ಲಿಸಿ, ನೆರೆ ಹೊರೆಯ ಮುತ್ತೈದೆಯರಿಗೆ ಉಡಿ ತುಂಬಿದರು.