ಅಡಕೆ ಕೊಯ್ಲು ವಿಚಾರದಲ್ಲಿ ಜಗಳ, ಕೊಲೆ ಮತ್ತು ಆತ್ಮಹತ್ಯೆಯಲ್ಲಿ ಅಂತ್ಯ

15 gkp 02
Published on

ಗೋಣಿಕೊಪ್ಪ: ಅಡಕೆ ಕೊಯ್ಲು ವಿಚಾರದ ಜಗಳ ಇಬ್ಬರ ಕೊಲೆ ಮತ್ತು ಒಬ್ಬರ ಆತ್ಮಹತ್ಯೆಯಲ್ಲಿ ಕೊನೆಯಾಗಿದೆ.
ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದಲ್ಲಿ ಶುಕ್ರವಾರ ೧೨ ಗಂಟೆ ಸುಮಾರಿಗೆ ನಡೆದಿದ್ದು, ಆಲೆಮಾಡ ಸಾಗರ್ ಸೋಮಯ್ಯ ಅವರ ಪತ್ನಿ ಯಶೋಧ (೪೪), ಸಾಗರ್ ಅವರ ಅಣ್ಣನ ಮಗ ಮಧು ಮುತ್ತಪ್ಪ (೩೯) ಕೊಲೆಯಾದವರು. ಆರೋಪಿ ಸಾಗರ್ ಸೋಮಯ್ಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಕ್ಷುಲ್ಲಕ ವಿಚಾರ ಮೂವರ ಸಾವಿಗೆ ಕಾರಣವಾಗಿದ್ದು, ಗ್ರಾಮದಲ್ಲಿ ಮೌನ ಆವರಿಸಿದೆ.
ಅಲೆಮಾಡ ಸೋಮಯ್ಯ ಸಾಗರ್ ಎಂಬಾತ ಐನ್ ಮನೆಯಲ್ಲಿ ತನ್ನ ಚಿಕ್ಕಪ್ಪನ ಮಗನಾದ ಮಧು ಎಂಬಾತನೊಂದಿಗೆ ಅಡಿಕೆ ಫಸಲಿನ ವಿಚಾರಕ್ಕೆ ತಗಾದೆ ತೆಗೆದಿದ್ದಾನೆ. ಮಾತಿಗೆ ಮಾತು ವಿಕೋಪಕ್ಕೆ ತೆರಳಿದಾಗ ಕೋವಿಯಿಂದ ಮಧುವಿನ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ಮಧು ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾರೆ. ತಡೆಯಲು ಹೋದ ಸಾಗರ್‌ನ ಪತ್ನಿ ಯಶೋಧಾರವರಿಗೆ ಗುಂಡೇಟು ತಗಲಿ ಚಿಂತಾಜನಕರಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಆರೋಪಿ ಸಾಗರ್ ಮನೆ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಡಿವೈಎಸ್‌ಪಿ ಜಯಕುಮಾರ್ ಸ್ಥಳಕ್ಕೆ ಆಗಮಿಸಿ ಕ್ರಮಕೈಗೊಂಡರು. ಮಧು, ಯಶೋಧ ಮೃತ ದೇಹವನ್ನು ಜಿಲ್ಲಾಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದ್ದು, ಸಾಗರ್ ಮೃತ ದೇಹವನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶವಗಾರಕ್ಕೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net