

ಕಡೂರು: ನನ್ನ ರಾಜಕೀಯ ಬೆಳವಣಿಗೆಯಲ್ಲಿ ಕಂಸಾಗರ ಗ್ರಾಮಸ್ಥರ ಪ್ರೋತ್ಸಾಹ ಹೆಚ್ಚಾಗಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀ ನಿವಾಸ್ ಹೇಳಿದರು.
ಕಂಸಾಗರ ಗ್ರಾಮದಲ್ಲಿ ಗ್ರಾಮಸ್ಥರು ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ರಾಜಕೀಯ ಹಿನ್ನಲೆಯಿಲ್ಲದ ನನ್ನಂತಹ ಸಾಮಾನ್ಯ ರೈತ ಕುಟುಂಬದ ವ್ಯಕ್ತಿಯನ್ನು ಪಕ್ಷೇತರನಾಗಿ ಪುರಸಭೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ವಾರ್ಡ್‌ನ ಮತದಾರರು ಅಭೂತ ಪೂರ್ವ ಬೆಂಬಲದೊಂದಿಗೆ ಚುನಾಯಿಸಲು ಕಂಸಾಗರ ಗ್ರಾಮದ ಸ್ನೇಹಬಳಗದ ಪ್ರೀತಿ ಹೆಚ್ಚಿನದಾಗಿತ್ತು ಎಂದರು.
ಎಲ್ಲರ ವಿಶ್ವಾಸದ ಪ್ರೀತಿಗಳಿಸಿದ್ದರ ಲವಾಗಿ ಇದೀಗ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಲು ಅವಕಾಶ ಲಭಿಸಿದೆ. ಇದನ್ನು ಮತ್ತಷ್ಟು ಅಭಿವೃದ್ಧಿ ಕಾರ್ಯದೆಡೆಗೆ ಸಮಯ ಮೀಸಲಿಟ್ಟು ನನ್ನ ಇತಿಮಿತಿಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲಾಗುತ್ತದೆ. ಪಟ್ಟಣದ ಅನತಿ ದೂರದಲ್ಲಿರುವ ಕಂಸಾಗರ ಗ್ರಾಮಕ್ಕೂ ಪಟ್ಟಣಕ್ಕೂ ಇತಿಹಾಸದಿಂದಲೂ ಅವಿನಾಭಾವ ಸಂಬಂಧವನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಗ್ರಾಮದ ಎಲ್ಲ ಸಮುದಾಯಗಳ ಸಮನ್ವತೆಯಿಂದ ಒಗ್ಗಟ್ಟನ್ನು ಇಂದಿಗೂ ಪ್ರದರ್ಶಿಸಿರುವುದು ಆರೋಗ್ಯಕರ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದರು.
ಜತೆಯಲ್ಲಿ ಪುರಸಭೆ ಅಧ್ಯಕ್ಷನಾಗಲು ತಾಪಂ ಮಾಜಿ ಅಧ್ಯಕ್ಷ ಸಿಗೇಹಡ್ಲು ಹರೀಶ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದಕ್ಕೆ ಪೂರಕವಾಗಿ ಪುರಸಭೆ ಸದಸ್ಯರ ಬೆಂಬಲವು ಹೆಚ್ಚಾಗಿತ್ತು. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಕ್ಷೇತ್ರದ ಶಾಸಕರೊಡನೆ ಚರ್ಚಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಲಾಗುವುದು ಎಂದರು.
ಪ್ರದೇಶ ಕುರುಬರ ಸಂಘದ ನಿರ್ದೇಶಕ ಲೋಕೇಶಪ್ಪ , ಪುರಸಭೆ ಸದಸ್ಯ ಮರುಗುದ್ದಿ ಮನು, ಮುಖಂಡರಾದ ಸಿಗೇಹಡ್ಲು ಹರೀಶ್, ಯರದಕೆರೆ ರಾಜಪ್ಪ, ತಿಪ್ಪೇಶ್, ಕಂಸಾಗರ ರೇವಣ್ಣ, ಪರಮೇಶ್ವರಪ್ಪ, ಗೋಪಿನಾಥ್, ಪ್ರದೀಪ್, ಕಂಸಾಗರ ಶೇಖರ್, ಡಿಶ್ ಮಂಜುನಾಥ್, ಪುಟ್ಟಸ್ವಾಮಿ, ಹರೀಶ್, ರಾಜೇಶ್, ತ್ಯಾಗರಾಜ್, ತಮ್ಮಯ್ಯ, ಚಂದ್ರನಾಯ್ಕ ಮತ್ತಿತರಿದ್ದರು.