ಮೋಡಿ ಮಾಡಿದ ಕುನಾಲ್ ಗಾಂಜಾವಾಲ ಹಾಡು

Published on

ಮೈಸೂರು: ಡ್ರೋನ್ ಪ್ರದರ್ಶನ ನೋಡುಗರ ಕಣ್ಮನ ತಣಿಸಿದರೆ, ಬಾಲಿವುಡ್‌ನ ಖ್ಯಾತ ಹಿನ್ನಲೆ ಗಾಯಕ ಕುನಾಲ್ ಗಾಂಜಾವಾಲ ಮತ್ತು ತಂಡ ಸಂಗೀತ ರಸಸಂಜೆ ಮನತಣಿಸಿತು.

ಪುನೀತ್ ರಾಜ್‌ಕುಮಾರ್ ಅಭಿನಯದ ‘ನೀನೆ ನೀನೆ.. ನನಗೆಲ್ಲಾ ನೀನೆ’ ಗೀತೆ ಹಾಡಿಕೊಂಡೇ ಕುನಾಲ್ ಗಾಂಜಾವಾಲ ವೇದಿಕೆ ಏರುತ್ತಿದ್ದಂತೆಯೇ ಇಡೀ ಸಭಾಂಗಣದಲ್ಲಿ ಜೋಶ್ ಬಂದಂತಾಯಿತು.

‘ಖುಷಿಯಾಗಿದೆ ಏಕೋ ನಿನ್ನಿಂದಲೆ..., ‘ಒಂದೇ ಒಂದು ಸಾರಿ ಕಣ್ಮುಂದೆ ಬಾರೆ..., ನಿನ್ನ ಕಂಡ ಕ್ಷಣದಿಂದ..., ಹುಡುಗಿ ಹುಡುಗಿ ನಿನ್ನ ಕಂಡಾಗ, ಕಿವಿ ಮಾತೊಂದು ಹೇಳಲೆ ನಾನಿಂದು ಸೇರಿದಂತೆ ಹಿಂದಿಯ ಹಲವು ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

360 ಡಿಗ್ರಿಯ ಸಭಾಂಗಣದಲ್ಲಿ ಹಾಡುತ್ತಿರುವುದು ಇದೇ ಮೊದಲು ಎಂದು ಸಂತಸದಿಂದಲೇ ಹಾಡು ಮುಂದುವರಿಸಿ ಕುನಾಲ್ ಗಾಂಜಾವಾಲ ವೇದಿಕೆ ಇಳಿದು ಸಭಾಂಗಣದ ತುಂಬ ಓಡಾಡಿ ಕೇಳುಗರಲ್ಲಿ ಜೋಶ್ ತುಂಬಿದರು. ಪುನೀತ್ ರಾಜ್‌ಕುಮಾರ್ ಹಾಡು ಹಾಡುವಾಗ ಇಡೀ ಸಭಾಂಗಣ ಮೊಬೈಲ್ ಟಾರ್ಜ್‌ನಿಂದ ಬೆಳಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net