ಸಮ್ಮೇಳನದ ಲಾಂಛನ ಸಂಸತಿಯ ಪ್ರತಿಕ

The emblem of the conference is the emblem of the parliament.
ತಿಕೋಟಾ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಿಕೋಟಾ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಗಣ್ಯರು ಬಿಡುಗಡೆಗೊಳಿಸಿದರು. ಹಾಸಿಂಪೀರ ವಾಲಿಕಾರ, ಸುರೇಶ ಚವಲರ, ಬಾಬುರಾವ ಮಹಾರಾಜರು ಮತ್ತಿತರರಿದ್ದಾರೆ.
Published on

ವಿಜಯಪುರ: ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಸಂಸತಿಯ ಪ್ರತಿಕವಾಗಿದೆ. ಈ ಭಾಗದ ಕೃಷಿ, ನೀರಾವರಿ, ಧಾರ್ಮಿಕ ಸ್ಥಳಗಳನ್ನೊಳಗೊಂಡ ಲಾಂಛನ ಅನಾವರಣಗೊಳಿಸಿದ್ದು ಅತ್ಯಂತ ಸಂತಸದ ವಿಚಾರ ಎಂದು ತಿಕೋಟಾ ತಾಲೂಕು ತಹಸೀಲ್ದಾರ್​ ಸುರೇಶ ಚವಲರ ಹೇಳಿದರು.

ತಿಕೋಟಾ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಿಕೋಟಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತಿಕೋಟಾ ಇತಿಹಾಸದಲ್ಲಿ ಸಮ್ಮೇಳನ ದಾಖಲೆಯಾಗುತ್ತಿದೆ. ಕನ್ನಡ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ತಾಲೂಕಿನ ಎಲ್ಲ ಕನ್ನಡದ ಅಭಿಮಾನಿಗಳು, ಹಿರಿಯರು, ಸಾಹಿತಿಗಳು, ಶಿಕ್ಷಕರು ಸೇರಿ ಎಲ್ಲ ಇಲಾಖೆ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಬುರಾವ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ತಹಸೀಲ್ದಾರ್​ ಸೋಮನಿಂಗ ಅರಕೇರಿ, ಸದಾಶಿವ ಮಂಗಸೂಳಿ, ರಾಮಚಂದ್ರ ದೇಸಾಯಿ, ಉಮೇಶ ಮೂರುತೇಲಿ, ಶರಣಮ್ಮ ಹಾದಿಮನಿ, ಮಲ್ಲಿಕಾರ್ಜುನ ಹಂಜಗಿ, ಚಂದ್ರಕಾಂತ ಗುಗ್ಗರಿ, ಜಿ.ಎಸ್​. ಲಕ್ಕುಂಡಿಮಠ, ಜಿ.ಎಸ್​. ಬಜಂತ್ರಿ, ಸುನೀಲಗೌಡ ನಾಲಾ, ಎಂ.ಐ. ಕಣಬೂರ, ಆಶಾರಾಣಿ ಬಿರಾದಾರ, ಭಾರತಿ ದೇವಕತೆ, ಸುರೇಶ ಚಾವರ, ಸೋಮಶೇಖರ ಜತ್ತಿ ಮತ್ತಿತರರಿದ್ದರು. ಸಾವಿತ್ರಿ ಬಾಗಲಕೋಟೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net