

ಹುಬ್ಬಳ್ಳಿ : ವೃತ್ತಿಪರ ಡಿಪ್ಲೋಮಾ ಮೂಲಕ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಇಲ್ಲಿನ ಗೋಕುಲ ರಸ್ತೆಯ ಪ್ರೖೆಡ್ ಐಕಾನ್ ಕಟ್ಟಡದಲ್ಲಿ ದಿ ಎಲಿಗಂಟ್ ಇನ್ಸ್ಟಿಟ್ಯೂಟ್ ಆರಂಭಿಸಲಾಗಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ದಿ ಎಲಿಗಂಟ್ ಇನ್ಸ್ಟಿಟ್ಯೂಟ್ನ ಚೀಫ್ ಆಪರೇಟಿಂಗ್ ಆಫೀಸರ್ ಅಜಯ ಕುಲಕರ್ಣಿ, ಜ. 6ರಂದು ಸಂಜೆ 4 ಗಂಟೆಗೆ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಅಶೋಕ ಶೆಟ್ಟರ್ ಅವರು ದಿ ಎಲಿಗಂಟ್ ಇನ್ಸ್ಟಿಟ್ಯೂಟ್ ಅನ್ನು ಲೋಕಾರ್ಪಣೆಗೊಳಿಸುವರು ಎಂದು ತಿಳಿಸಿದರು.
ಸಿಎ ಮಲ್ಲಿಕಾರ್ಜುನ ಪಿಸೆ, ಎಚ್.ಎನ್. ಅದಿನವರ, ಡೆನಿಸನ್ಸ್ ಗ್ರುಪ್ ಆಫ್ ಹೋಟೆಲ್ನ ವಿಪಿ ಚೇತನ ಕಾಮತ, ಹಂಡಾ ಗ್ರುಪ್ ಆಫ್ ಕಂಪನಿಯ ಮಾಲೀಕರಾದ ಡಾ. ರೀಟಾ ಹಂಡಾ, ವಿಸನ್ ಪ್ಲೈ ನಿರ್ದೇಶಕ ದಿನೇಶ ಶಾನಭಾಗ, ಮಯೂರ ಆದಿತ್ಯ ಹೋಟೆಲ್ ಸಿಇಒ ಹೇಮಲ್ ದೇಸಾಯಿ ಹಾಗೂ ಮತ್ತಿತರ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
1 ವರ್ಷ ಅವಧಿಯ ಡಿಪ್ಲೋಮಾ ಇನ್ ಹೋಟೆಲ್ ಮ್ಯಾನೇಜ್ವೆುಂಟ್, ಡಿಪ್ಲೋಮಾ ಇನ್ ಅಗ್ನಿ ಮತ್ತು ಸುರಕ್ಷತಾ ಮ್ಯಾನೇಜ್ವೆುಂಟ್, ಡಿಪ್ಲೋಮಾ ಇನ್ ಬ್ಯೂಟಿ ಟೆಕ್ನಿಷಿಯನ್, 6 ತಿಂಗಳ ಅವಧಿಯ ಡಿಪ್ಲೋಮಾ ಇನ್ ಪೈನಾನ್ಸಿಯಲ್ ಅಕೌಂಟಿಂಗ್, 3 ತಿಂಗಳ ಅವಧಿಯ ಸರ್ಟಿಫಿಕೆಟ್ ಇನ್ ಇಂಗ್ಲಿಷ್ ಕೋರ್ಸ್ಗಳನ್ನು ಈ ಇನ್ಸ್ಟಿಟ್ಯೂಟ್ನಲ್ಲಿ ಪ್ರಾರಂಭಿಸಲಾಗಿದೆ. ಇಲ್ಲಿ ಡಿಪ್ಲೋಮಾ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶದಲ್ಲಿಯೂ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ಇನ್ಸ್ಟಿಟ್ಯೂಟ್ನಲ್ಲಿ 5 ಜನ ಕಾಯಂ ಉಪನ್ಯಾಸಕರಿದ್ದು, ಅನುಭವಿ ಅತಿಥಿ ಉಪನ್ಯಾಸಕರನ್ನೂ ಕರೆಯಿಸಲಾಗುವುದು. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುವುದು. ಪ್ರತಿ ಕೋರ್ಸ್ಗೆ 50 ಜನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇದೆ ಎಂದರು.
ಇನ್ಸ್ಟಿಟ್ಯೂಟ್ನ ಸಿಇಒ ಉದಯ ಬೆಂಜಮಿನ್, ಅರುಣ ಸವದತ್ತಿ, ರೀಟಾ ಹಂಡಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.