

ಹುಣಸೂರು : ಅನಾಥರಾಗಿ ಬೀದಿ ಬದಿಯಲ್ಲಿ ಬದುಕುತ್ತಿದ್ದ ಇಬ್ಬರು ವೃದ್ಧೆಯರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ದೊರಕಿಸಿಕೊಡುವ ಮೂಲಕ ಬೆಳಕು ಸೇವಾ ಸಂಸ್ಥೆ ನಿಸ್ವಾರ್ಥ ಸೇವೆಗೈದಿದೆ.
ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ನಂದಿ ಸರ್ಕಲ್ ಬಳಿಯ ಬಸ್ ಶೆಲ್ಟರ್‌ನಲ್ಲಿ ಹಲವು ವರ್ಷಗಳಿಂದ ನಿರ್ಗತಿಕರಾಗಿ ಬದುಕುತ್ತಿದ್ದ 75ರ ಹರೆಯದ ಮುನಿಯಮ್ಮ ಮತ್ತು ಜಯಮ್ಮ ಎಂಬ ವೃದ್ಧೆಯರಿಗೆ ಬುಧವಾರ ಕಂದಾಯ ಇಲಾಖೆ ಅಕಾರಿಗಳು ಸಂಧ್ಯಾಸುರಕ್ಷಾ ಯೋಜನೆಯಡಿ ಮಾಸಾಶನದ ಮಂಜೂರಾತಿ ಪತ್ರ ವಿತರಿಸಿದರು.
ಈ ವೇಳೆ ಮಾತನಾಡಿದ ಬೆಳಕು ಸೇವಾ ಸಂಸ್ಥೆ ಮುಖ್ಯಸ್ಥ ನಿಂಗರಾಜ ಮಲ್ಲಾಡಿ, ಈ ವೃದ್ಧೆಯರಿಗೆ ಕಟ್ಟೆಮಳಲವಾಡಿ ಗ್ರಾಮದ ಲಕ್ಷ್ಮಣತೀರ್ಥ ನದಿಯ ದಂಡೆಯ ಪಕ್ಕದಲ್ಲಿ ತಾತ್ಕಾಲಿಕ ಗುಡಿಸಲುಗಳನ್ನು ಹಾಕಿಸಿ ಅಲ್ಲಿ ನೆಲೆಸಲು ಅನುವು ಮಾಡಲಾಯಿತು. ನಂತರ ಯಾವುದೇ ದಾಖಲೆ ಇಲ್ಲದ ಈ ಇಬ್ಬರು ವೃದ್ಧೆಯರಿಗೆ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಐ.ಡಿ. ಕಾರ್ಡ್, ಬ್ಯಾಂಕ್ ಖಾತೆ ಮುಂತಾದ ದಾಖಲೆಗಳನ್ನು ಸಿದ್ಧಪಡಿಸಲಾಯಿತು. ಈ ನಡುವೆ ಜಯಮ್ಮನ ಅನಾರೋಗ್ಯಪೀಡಿತ ಪುತ್ರ ಮೃತಪಟ್ಟಾಗ ಆತನ ಶವಸಂಸ್ಕಾರವನ್ನೂ ಸಂಸ್ಥೆ ನೆರವೇರಿಸಲಾಯಿತು ಎಂದರು.
ಇಬ್ಬರು ವೃದ್ಧೆಯರ ಅಮಾನವೀಯ ಬದುಕಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸಿದ್ದನ್ನು ಗಮನಿಸಿದ ಅಂದಿನ ಜಿಲ್ಲಾಕಾರಿ ಡಾ.ರಾಜೇಂದ್ರ ಅವರು ಸ್ಥಳಕ್ಕೆ ಧಾವಿಸಿ ಇಬ್ಬರು ವೃದ್ಧೆಯರಿಗೂ ಮಾಸಾಶನ ಮಂಜೂರು ಮಾಡುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದರು. ಅದರಂತೆ ಇದೀಗ ಕಂದಾಯ ಇಲಾಖೆ ಅಕಾರಿಗಳು ಮಾಸಾಶನ ಮಂಜೂರಾತಿ ಪತ್ರವನ್ನು ವಿತರಿಸಿದ್ದಾರೆ. ಬೆಳಕು ಸೇವಾ ಸಂಸ್ಥೆಯ ವರ್ಷಗಳ ಕಾಲದ ಪ್ರಯತ್ನಕ್ಕೆ ಲ ಸಿಕ್ಕಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಗಾವಡಗೆರೆ ಉಪತಹಸೀಲ್ದಾರ್ ಅರುಣ್ ಕುಮಾರ್, ರಾಜಸ್ವ ನಿರೀಕ್ಷಕ ಹೇಮಂತ್, ಕಟ್ಟೆಮಳಲವಾ ಗ್ರಾಮದ ಆಡಳಿತಾಕಾರಿ ಶ್ರೀವಾಸ್ತವ ಇತರರು ಹಾಜರಿದ್ದರು.