ಭವ್ಯ ಭಾರತ ನಿರ್ಮಾಣಕ್ಕೆ ಮಹನೀಯರ ಶ್ರಮ ಅಪಾರ

ಹೊಳೆನರಸೀಪುರ ತಾಲೂಕಿನ ಪಡವಲಹಿಪ್ಪೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿ.ಡಿ. ನಾರಾಯಣ್ ಉದ್ಘಾಟಿಸಿದರು.
ಹೊಳೆನರಸೀಪುರ ತಾಲೂಕಿನ ಪಡವಲಹಿಪ್ಪೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿ.ಡಿ. ನಾರಾಯಣ್ ಉದ್ಘಾಟಿಸಿದರು.
Published on

ಹೊಳೆನರಸೀಪುರ: ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ಹತ್ತಾರು ಭಾಷೆ, ಅನೇಕ ಧರ್ಮ, ವಿವಿಧ ಬಗೆಯ ಆಚರಣೆಗಳನ್ನು ಹೊಂದಿದೆ ಎಂದು ಗೃಹ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಚಿಕ್ಕಮಗಳೂರು ಗಣೇಶ್ ಹೇಳಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಾಲೂಕಿನ ಪಡವಲಹಿಪ್ಪೆ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ಹಬ್ಬ ಮತ್ತು ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭವ್ಯ ಭಾರತ ನಿರ್ಮಾಣಕ್ಕೆ ಅನೇಕರು ಶ್ರಮಿಸಿದ್ದು, ಎಲ್ಲ ಭಾಷೆಯವರಿಗೂ ಆಶ್ರಯ ಕೊಟ್ಟ ಶ್ರೀಮಂತಭಾಷೆ ಕನ್ನಡ. ಅಲ್ಲದೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿ ಎಂದು ಆಚಾರ್ಯ ವಿನೋಬಾ ಭಾವೆ ಕರೆದಿದ್ದಾರೆ ಎಂದು ವಿವರಿಸಿದರು.

ಕನ್ನಡವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದು. ನಮಗೆ ಎಲ್ಲ ಭಾಷೆಗಳ ಮೇಲೆ ಅಭಿಮಾನ ಇರಬೇಕು. ಆದರೆ ಕನ್ನಡಕ್ಕೆ ತಾಯಿ ಸ್ಥಾನ ನೀಡಬೇಕು. ಸಂಸ್ಕೃತ ಭಾಷೆ ಸಮೃದ್ಧವಾಗಿದ್ದ ಸಂದರ್ಭದಲ್ಲಿ ಕನ್ನಡದಲ್ಲಿ ಮೇರು ಕೃತಿಗಳನ್ನು ಕೊಟ್ಟ ಪಂಪ ಮೊದಲ ಕನ್ನಡಪರ ಹೋರಾಟಗಾರ. ಕನಕದಾಸರು ದಾಸರಲ್ಲಿಯೇ ಶ್ರೇಷ್ಠರು. ಕನಕದಾಸರ ಕೃತಿಗಳು, ಕೀರ್ತನೆಗಳು ಇಂದಿಗೂ ಪ್ರಸ್ತುತ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಗ್ಯಾರಂಟಿ ರಾಮಣ್ಣ ನೇತೃತ್ವದ ತಂಡದ ಕನ್ನಡ ಗೀತೆ, ತತ್ವಪದ, ಕೀರ್ತನೆಗಳನ್ನು ಹಾಡಿತು. ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಡಿ.ನಾರಾಯಣ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲರಾದ ಕೆ.ಸಿ.ವಿಶ್ವನಾಥ್, ಪಿ.ಆರ್.ಶಿವಕುಮಾರ್, ಸಿ.ಎಸ್.ಅನಂತ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net