ಶಿಕ್ಷಣ ವ್ಯತ್ಯಾಸ ಅಜಗಜಾಂತರ

h23-rotary midtown
Published on

ಹುಬ್ಬಳ್ಳಿ: ಇಲ್ಲಿಯ ಬ್ರಾಡ್‌ವೇನಲ್ಲಿಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.2ಕ್ಕೆ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡಟೌನ್ ವತಿಯಿಂದ 25 ಡೆಸ್ಕ್‌ಗಳನ್ನು ಸೋಮವಾರ ನೀಡಲಾಯಿತು.

ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ನಾವು ನೆಲದ ಮೇಲೆ ಕುಳಿತು ಅಕ್ಷರಾಭ್ಯಾಸ ಮಾಡುತ್ತಿದ್ದೆವು. ಇಂದಿನ ಶಿಕ್ಷಣಕ್ಕೂ ಹಿಂದಿನ ಶಿಕ್ಷಣಕ್ಕೂ ಬಹಳ ವ್ಯತ್ಯಾಸವಿದೆ. ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಬಿಸಿಯೂಟ ಕೊಡಲಾಗುತ್ತಿದೆ. ಈ ಸವಲತ್ತು ಪಡೆದು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಶಾಲೆ ಮತ್ತು ತಂದೆ-ತಾಯಿಗೆ ಗೌರವ ತರಬೇಕು ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಪ್ರವೀಣ ಬನಸಾಲಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹೇಶ ಚಿಕ್ಕವಿರಮಠ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net