ನಿರಾಶದಾಯಕ ಸ್ಥಿತಿಗೆ ದೇಶದ ಆರ್ಥಿಕತೆ

Siddaramaiah
Published on

ಬೆಂಗಳೂರು: ದೇಶದ ಸದ್ಯದ ಆತಂಕಕಾರಿ ಆರ್ಥಿಕ ಪರಿಸ್ಥಿತಿಯನ್ನು ಜನತೆ ಸರಿ ಯಾಗಿ ಅರ್ಥ ಮಾಡಿಕೊಳ್ಳದೆ, ಧ್ವನಿ ಎತ್ತದೇ ಹೋದರೆ ಮತ್ತೆಂದೂ ದೇಶ ಮೊದಲಿನ ಸ್ಥಿತಿಗೆ ಚೇತರಿಸಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್​ ಚಿಂತನ ಶಿಬಿರದಲ್ಲಿ ಆರ್ಥಿಕ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ ಅವರು, ದೇಶದ ಆರ್ಥಿಕತೆ ದಿನದಿಂದ ದಿನಕ್ಕೆ ನಿರಾಶಾದಾಯಕ ಸ್ಥಿತಿಯತ್ತ ತಲುಪುತ್ತಿದೆ. ಜನರಿಗೆ ವಾಸ್ತವಾಂಶಗಳು ತಿಳಿಯಬಾರದೆಂದು ಅಂಕಿ&ಅಂಶಗಳನ್ನು ತಿರುಚುವ ಕೆಟ್ಟ ಸಾಹಸಕ್ಕೆ ಸರ್ಕಾರ ಮುಂದಾಗಿದೆ. ಯೋಜನಾ ಆಯೋಗವನ್ನು ರದ್ದು ಮಾಡಿ ನೀತಿ ಆಯೋಗವನ್ನು ಅಂಕಿ&ಅಂಶ ತಿರುಚುವ ಉದ್ದೇಶದಿಂದಲೇ ರಚಿಸಲಾಯಿತು ಎಂದು ದೂರಿದರು.

ನ್ಯಾಯಬದ್ಧವಾಗಿ ನಡೆಸಬೇಕಾದ ಸಮೀೆಗಳನ್ನು ನಡೆಸುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಿಬಿಟ್ಟಿದೆ. ಉದಾಹರಣೆಗೆ ಎನ್​ಎಸ್​ಎಸ್​ಒ ದೇಶದ ಬಡತನ, ಹಸಿವು, ಉದ್ಯೋಗ ಮುಂತಾದ ವಿಷಯಗಳ ಮೇಲೆ ಸಮೀೆ ನಡೆಸಿ ಆಡಳಿತ ನಡೆಸುವ ಸರ್ಕಾರಗಳಿಗೆ ವಾಸ್ತವಾಂಶದ ಸ್ಥಿತಿ ಗತಿಗಳನ್ನು ಮಂಡಿಸುತ್ತಿತ್ತು. ಈ ಸಂಸ್ಥೆಯ ಸಮೀೆಗಳನ್ನೇ ಸಂಪೂರ್ಣ ನಿಲ್ಲಿಸಲಾಗಿದೆ. 2017&18ರಲ್ಲಿ ಸಮೀೆ ನಡೆಸುವಂತೆ ಸೂಚಿಸಲಾಗಿತ್ತು. ಸಂಸ್ಥೆ ಸರ್ವೇಯನ್ನೂ ಮಾಡಿತು. ಆದರೆ ಸರ್ಕಾರದ ಕಾರ್ಯ ವೈಖರಿಗೆ ಸಂಪೂರ್ಣ ವಿರುದ್ಧವಾಗಿದೆ ಎಂಬುದು ತಿಳಿದ ಕೂಡಲೆ ಮೋದಿ ಸರ್ಕಾರ ಸಮೀೆಯನ್ನು ಬಿಡುಗಡೆಯಾಗದಂತೆ ನೋಡಿಕೊಂಡಿತು. ಆದರೂ ಕೆಲವು ಮಾಧ್ಯಮಗಳು ಸಮೀೆಯ ವರದಿಯನ್ನೂ ಸೋರಿಕೆ ಮಾಡಿದವು. ವರದಿಯು ದೇಶದ ಸ್ಥಿತಿ ವಿಪರೀತ ಸಂಕಷ್ಟದತ್ತ ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತಿತ್ತು ಎಂದು ವಿವರಿಸಿದರು.

ವಿಶ್ವಬ್ಯಾಂಕಿನ ಅಂಕಿ&ಅಂಶಗಳ ಆಧಾರದ ಮೇಲೆ ನೋಡುವುದಾದರೆ 2004ರಲ್ಲಿ ಭಾರತದ ಒಟ್ಟು ಜಿಡಿಪಿ 0.7 ಟ್ರಿಲಿಯನ್​ ಡಾಲರುಗಳಿಷ್ಟಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ 2.04 ಟ್ರಿಲಿಯನ್​ ಡಾಲರ್​ಗಳಿಗೆ ಏರಿಕೆಯಾಯಿತು. 2019 ರಲ್ಲಿ 2.87 ಟ್ರಿಲಿಯನ್​ ಡಾಲರ್​ ಇದ್ದದ್ದು 2020 ರಲ್ಲಿ 2.62 ಟ್ರಿಲಿಯನ್​ ಡಾಲರ್​ಗೆ ಕುಸಿಯಿತು. 2021ರಲ್ಲಿ 2.71 ಟ್ರಿಲಿಯನ್​ ಡಾಲರ್​ರಷ್ಟಿದೆ. ಎಲ್ಲ ಪರಿಸ್ಥಿತಿಗಳು ಸರಿಯಾಗಿದ್ದರೆ 2022ರಲ್ಲಿ 2.88 ಟ್ರಿಲಿಯನ್​ ಡಾಲರುಗಳಷ್ಟಾಗಬಹುದು ಎಂದು ಅಂದಾಜಿಸಲಾಗಿದೆ. ಪಿ. ಚಿದಂಬರಂ ಹೇಳುವ ಹಾಗೆ ಇದ್ದ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ನಡೆಯಲು ಪ್ರಧಾನಿ ಮೋದಿ ಬಿಟ್ಟಿದ್ದರೂ ಮುಂದಿನ ವರ್ಷದ ವೇಳೆಗೆ 5 ಟ್ರಿಲಿಯನ್​ ಡಾಲರ್​ ಎಕಾನಮಿ ನಮ್ಮದಾಗುತ್ತಿತ್ತು. ರಿಸರ್ವ್​ ಬ್ಯಾಂಕ್​ ಆ್​ ಇಂಡಿಯಾ, ನೀತಿ ಆಯೋಗ, ಸಿಎಜಿ ಇವೆಲ್ಲವೂ ಬಿಜೆಪಿ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಾ ದೇಶದ ಹಿತಾಸಕ್ತಿಯನ್ನು ಮರೆತಂತೆ ವರ್ತಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಎಲ್ಲ ರಾಜ್ಯಗಳ ಸಾಲ 2014 ರ ಮಾರ್ಚ್​ ವೇಳೆಗೆ 24.71 ಲ ಕೋಟಿ ಇತ್ತು. ಆದರೆ 2022 ರ ಮಾರ್ಚ್​ ವೇಳೆಗೆ ಈ ಪ್ರಮಾಣ 70 ಲ ಕೋಟಿಯನ್ನು ದಾಟುತ್ತಿದೆ. 2022 ರಲ್ಲಿ ಮಾಡುವ ಸಾಲವೂ ಸೇರಿದರೆ ಈ ಪ್ರಮಾಣ 80 ಲ ಕೋಟಿ ರೂಗಳಷ್ಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ 2019ರ ಸೆಪ್ಟೆಂಬರ್​ನಲ್ಲಿ ಕಾರ್ಪೊರೇಟ್​ ತೆರಿಗೆಯನ್ನು ಶೇ.30 ರಿಂದ ಶೇ.22 ಕ್ಕೆ ಇಳಿಸಿತು. ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ವಿಧಿಸುತ್ತಿದ್ದ ಸೆಸ್​ ಮತ್ತು ಸರ್​ ಚಾರ್ಜ್​ಗಳನ್ನು ಮೇ 2020ರಿಂದ ದಯನೀಯ ರೀತಿಯಲ್ಲಿ ಏರಿಕೆ ಮಾಡಿತು. 2019ರಲ್ಲಿ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾಪೋರ್ರೇಟ್​ಕಂಪೆನಿಗಳಿಗೆ ಶೇ.8 ತೆರಿಗೆ ಕಡಿತದ ಲಾಭ ದೊರೆಯಿತು ಎಂದು ವಿವರಿಸಿದರು.

ದೇಶದ ಜನರಿಗೆ ಆರ್ಥಿಕ ಸ್ಥಿತಿ ಕೆಟ್ಟು ಹೋಗಿರುವ ಬಗ್ಗೆ ಸರಿಯಾಗಿ ಅರ್ಥ ಮಾಡಿಸುವ ಹೊಣೆಗಾರಿಕೆ ಕಾಂಗ್ರೆಸ್​ ಮೇಲಿದೆ. ದೇಶದ ಜನರನ್ನು ಬಿಜೆಪಿ ಸರ್ಕಾರ ಹೇಗೆ ಅನಾಗರಿಕವಾಗಿ, ಅಮಾನವೀಯವಾಗಿ ಬೆಲೆ ಏರಿಕೆ&ಹಣದುಬ್ಬರದ ಮೂಲಕ ನಲುಗಿಸುತ್ತಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಸಬೇಕು | ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ

ಪರಿಹಾರಗಳೇನು? ಕೇಂದ್ರದ ವಿರುದ್ಧ ಬರೀ ಆರೋಪಗಳನ್ನು ಮಾಡದ ಸಿದ್ದರಾಮಯ್ಯ, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಪೂರಕವಾಗಿ ಕೆಲವು ಪರಿಹಾರಗಳನ್ನು ಸೂಚಿಸಿದರು. ಕಾರ್ಪೊರೇಟ್​ ತೆರಿಗೆಯನ್ನು ಹೆಚ್ಚು ಮಾಡಬೇಕು. ಬ್ರೆಜಿಲ್​, ಫಾನ್ಸ್​, ಜರ್ಮನಿ, ಮೆಕ್ಸಿಕೊ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಕಾರ್ಪೊರೇಟ್​ ತೆರಿಗೆ ಶೇ.30 ಕ್ಕಿಂತ ಹೆಚ್ಚಿದೆ. ನಮ್ಮಲ್ಲೂ ಹಿಂದೆ ಇದ್ದ ಶೇ. 32 ತೆರಿಗೆ ವಿಧಿಸಬೇಕು. ಸಾಧ್ಯವಾದರೆ ಶೇ. 35ಕ್ಕೆ ಏರಿಸಬೇಕು ಎಂದರು. ಜಿಎಸ್​ಟಿ ವ್ಯವಸ್ಥೆಯು ಸಂಪೂರ್ಣವಾಗಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಅದನ್ನು ಒಕ್ಕೂಟ ವ್ಯವಸ್ಥೆಗೆ ಪೂರಕವಾಗುವಂತೆ ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಬಜೆಟ್​ ಗಾತ್ರ ಮಾತ್ರ ದೊಡ್ಡದಾಗುತ್ತಿದೆ. ಆದರೆ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಹಣದ ಪ್ರಮಾಣ ಕಡಿಮೆಯಾಗುತ್ತಿದೆ. 2022&23ರ ಕೇಂದ್ರದ ಬಜೆಟ್​ನಲ್ಲಿ ನೀಡುತ್ತಿರುವ ಸಬ್ಸಿಡಿಗಳು, 2021&22ಕ್ಕೆ ಹೋಲಿಸಿದರೆ ಗಾಬರಿಯಾಗುವಷ್ಟು ಕಡಿಮೆ ಯಾಗಿವೆ. ಇವುಗಳನ್ನು ಹೆಚ್ಚಿಸ ಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net