ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವುದು ಕರ್ತವ್ಯ, ಉಪನ್ಯಾಸಕ ಮಾರುತಿ ಅಭಿಪ್ರಾಯ, ಯೋಧ ಹನುಮಂತರಾಯಪ್ಪಗೆ ಶ್ರದ್ಧಾಂಜಲಿ

10 Nela Ph 02 Abhinandane
Published on

ನೆಲಮಂಗಲ: ದೇಶ ಸೇವೆಯಲ್ಲಿ ತೊಡಗಿಸಿಕೊಂಡು ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಉಪನ್ಯಾಸಕ ಮಾರುತಿ ತಿಳಿಸಿದರು.

ತಾಲೂಕಿನ ಮೈಲನಹಳ್ಳಿಯಲ್ಲಿ ಭಾನುವಾರ ಗ್ರಾಮಸ್ಥರು ಆಯೋಜಿಸಿದ್ದ ಹನುಮಂತರಾಯಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, 2021ರ ಜ.3ರಂದು ಹೃದಯಘಾತದಿಂದ ಮೃತಪಟ್ಟ ಎಂ.ಬಿ. ಹನುಮಂತರಾಯಪ್ಪ 2017ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡು ಕೃಷಿಯಲ್ಲಿ ತೊಡಗಿಕೊಂಡಿದ್ದರು ಎಂದರು.

ತಾಲೂಕಿನಲ್ಲಿ ವೀರ ಯೋಧರನ್ನು ಒಳಗೊಂಡಿರುವ ಗ್ರಾಮಗಳಲ್ಲಿ ಮೈಲನಹಳ್ಳಿಯೂ ಒಂದು. ಗ್ರಾಮದಲ್ಲಿ ಇಬ್ಬರು ವೀರ ಯೋಧರ ಪೈಕಿ ಇಂದು ಒಂದು ಕಣ್ಣು ಇಲ್ಲವಾಗಿದೆ. ಅನ್ನ ನೀಡುವ ರೈತ ಮತ್ತು ದೇಶಕಾಯುವ ಯೋಧನನ್ನು ಎಂದಿಗೂ ಮರೆಯಬಾರದು. ಎಂ.ಬಿ.ಹನುಮಂತರಾಯಪ್ಪ ಅವರು ದೇಶ ಸೇವೆ ಮಾಡಿ ಗ್ರಾಮಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ ಎಂದರು.

ನಿವೃತ್ತ ಸೈನಿಕ ಸುರೇಶ್‌ಕುಮಾರ್ ಮಾತನಾಡಿ, ದೇಶಸೇವೆ ಮಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಇಂದು ಸೇವಾ ನಿವೃತ್ತಿ ಹೊಂದಿದ್ದ ಸ್ನೇಹಿತ ಹನುಮಂತರಾಯಪ್ಪ ಪ್ರತಿಯೊಬ್ಬ ಯುವಕರಿಗೆ ಸ್ಫೂರ್ತಿ ಆಗಬೇಕು. ಅವರನ್ನು ಕಳೆದಕೊಂಡ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹಾರೈಸಿದರು.

ಗ್ರಾಪಂ ಮಾಜಿ ಸದಸ್ಯ ಮರಿಯಲ್ಲಗಯ್ಯ, ಮುಖಂಡರಾದ ನಟರಾಜು, ಎಂ.ಪ್ರಶಾಂತ್, ಸಿದ್ದಗಂಗಪ್ಪ, ಹನುಮಂತರಾಯಪ್ಪ, ಮಾಳಯ್ಯ, ಮುನಿಯಲ್ಲಗಯ್ಯ, ತಿಮ್ಮಪ್ಪ, ಜಯಣ್ಣ, ಗಂಗೇಗೌಡ, ಎಂ.ಲೋಕೇಶ್, ಬಸಪ್ಪ, ರಘು, ಶ್ರೀನಿವಾಸ್, ಎಸ್.ವಿಶ್ವನಾಥ್, ದುರ್ಗಪ್ರಸಾದ್, ಎಂ.ಉಮೇಶ್, ಶಿಕ್ಷಕ ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net