ಟ್ಯಾಕ್ಟರ್‌ನಿಂದ ಹಾರಿದ ಚಾಲಕ ಕಂದಕಕ್ಕೆ ಬಿದ್ದು ಗಂಭೀರ ಗಾಯ

toing
ಟೋಯಿಂಗ್ ವಾಹನದಲ್ಲಿ ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್.
Published on

ಹೆಬ್ರಿ: ಹೆಬ್ರಿ ಕಡೆಯಿಂದ ಶಿವಮೊಗ್ಗಕ್ಕೆ ಭಾನುವಾರ ಸಾಯಂಕಾಲ ಟೋಯಿಂಗ್ ವಾಹನದಲ್ಲಿ ಟ್ಯಾಕ್ಟರ್ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆಗುಂಬೆ 7ನೇ ತಿರುವಿನಲ್ಲಿ ಟೋಯಿಂಗ್ ವಾಹನ ಹಿಂದಕ್ಕೆ ಚಲಿಸಿದ ವೇಳೆ ಟ್ರಾೃಕ್ಟರ್ ಚಾಲಕ ಭಯದಿಂದ ಹಾರಿದ ಪರಿಣಾಮ ಸುಮಾರು 25 ಅಡಿ ಕಂದಕಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಟ್ರಾೃಕ್ಟರ್ ಚಾಲಕನನ್ನು ಮೇಲಕ್ಕೆತ್ತಿ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಘಾಟಿಯಲ್ಲಿ ಕೆಲಕಾಲ ಸಂಚಾರದಲ್ಲಿ ವೃತ್ಯಯವಾಗಿತ್ತು. ಆಗುಂಬೆ ಎಸ್‌ಐ ರಂಗನಾಥ್ ಸ್ಥಳಕ್ಕೆ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net