ದಾರಿ ಕಾಣದೆ ಆಟೋ ಉರುಳಿ ಚಾಲಕನಿಗೆ ಗಾಯ

bnk2
ಅತ್ತಿಗೆರೆಯಲ್ಲಿ ಅಪಘಾತಕ್ಕೀಡಾದ ಆಟೋ.
Published on

ಬಣಕಲ್: ಅತ್ತಿಗೆರೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೆ ಆಟೋ ಗದ್ದೆಗೆ ಪಲ್ಟಿಯಾಗಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಮಂಗಳವಾರ ಬೆಳಗ್ಗೆ ಬೆಳ್ತಂಗಡಿ ನಿವಾಸಿ ನಜೀರ್ ಕುಟುಂಬದವರು ಜಾವಗಲ್‌ನಿಂದ ಬೆಳ್ತಂಗಡಿಗೆ ತೆರಳುತ್ತಿದ್ದರು. ಅತ್ತಿಗೆರೆ ಬಳಿ ರಸ್ತೆ ಕಾಣದೆ ಆಟೋ ಗದ್ದೆಗೆ ಪಲ್ಟಿಯಾಗಿದ್ದು, ಚಾಲಕ ನಜೀರ್ ಸಿಕ್ಕಿ ಹಾಕಿಕೊಂಡಿದ್ದರು. ಅವರನ್ನು ಬಣಕಲ್ ಸಮಾಜ ಸೇವಕ ಮೊಹಮ್ಮದ್ ಆರ್ೀ ಹಾಗೂ ಸ್ಥಳೀಯರು ರಕ್ಷಣೆ ಮಾಡಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net