ಹಳ್ಳಕ್ಕೆ ಬಿದ್ದ ಟ್ರ್ಯಾಕ್ಟರ್‌ ಚಾಲಕ ಪಾರು

11 MDG 3
Published on

ಮುಂಡರಗಿ: ತಾಲೂಕಿನ ಬೆಣ್ಣಿಹಳ್ಳಿ-ನಾಗರಹಳ್ಳಿ ಮಾರ್ಗಮಧ್ಯೆ ಹರಿದಿರುವ ಹಳ್ಳದಲ್ಲಿ ಟ್ರ್ಯಾಕ್ಟರ್‌ವೊಂದು ಆಯತಪ್ಪಿ ಹಳ್ಳಕ್ಕೆ ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.

ತಾಲೂಕಿನ ಕಲಕೇರಿ ಗ್ರಾಮದ ಮಹೇಶ ಹುಳಕಣ್ಣವರ ಎಂಬುವವರ ಟ್ರ್ಯಾಕ್ಟರ್ ನಾಗರಹಳ್ಳಿ ಭಾಗದಿಂದ ಹಳ್ಳದ ಮಾರ್ಗವಾಗಿ ಕಲಕೇರಿಗೆ ಬರುವ ಸಂದರ್ಭದಲ್ಲಿ ಅವಘಡ ನಡೆದಿದೆ. ಮಹೇಶ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರು. ಎದುರಿಗೆ ಮತ್ತೊಂದು ಟ್ರ್ಯಾಕ್ಟರ್ ಬಂದಿದ್ದರಿಂದ ಹಳ್ಳದ ರಸ್ತೆಯ ಬದಿಗೆ ಚಲಾಯಿಸಲು ಮುಂದಾದಾಗ ಹಳ್ಳದ ಮಾರ್ಗದಲ್ಲಿ ಹೆಚ್ಚು ಪಾಚಿಗಟ್ಟಿದ್ದರಿಂದ ಟ್ರ್ಯಾಕ್ಟರ್ ಜಾರಿ ಹಳ್ಳಕ್ಕೆ ವಾಲಿ ಬಿದ್ದಿದೆ. ಚಾಲಕ ಮಹೇಶ ನೀರಿನಲ್ಲಿ ಹಾರಿ ಈಜಿ ದಡ ಸೇರಿ ಅಪಾಯದಿಂದ ಪಾರಾಗಿದ್ದಾರೆ. ನಂತರ ಬೆಣ್ಣಿಹಳ್ಳಿ, ನಾಗರಹಳ್ಳಿ ಗ್ರಾಮಸ್ಥರು ಜೆಸಿಬಿ ಸಹಾಯದಿಂದ ಟ್ರ್ಯಾಕ್ಟರ್ ಮೇಲೆತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net