ಚಾಲಕನ ನಿಯಂತ್ರಣ ತಪ್ಪಿ ಮಾಜಿ ಶಾಸಕರಿದ್ದ ಕಾರು ಅಪಘಾತ, ಅನಾಹುತ ತಪ್ಪಿಸಿದ ಏರ್ ಬ್ಯಾಗ್​ಗಳು

8mnd2 VS PATIL
Published on

ಮುಂಡಗೋಡ: ತಾಲೂಕಿನ ಹಾರವಳ್ಳಿ ಗ್ರಾಮದ ಹತ್ತಿರ ಮಾಜಿ ಶಾಸಕ ವಿ.ಎಸ್. ಪಾಟೀಲ ಅವರ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಶುಕ್ರವಾರ ನಡೆದಿದೆ.

ಶಿರಸಿ ತಾಲೂಕಿನ ಬನವಾಸಿಯಿಂದ ಪಾಳಾ- ರಾಮಪುರ ಮಾರ್ಗವಾಗಿ ಅಂದಲಗಿಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಚಾಲಕ ಆನಂದ ಆಲೂರನಿಗೆ ಕಣ್ಣಿಗೆ ಹಾಗೂ ಮಾಜಿ ಶಾಸಕ ವಿ.ಎಸ್ .ಪಾಟೀಲ ಅವರ ಎದೆಗೆ ಪೆಟ್ಟು ಬಿದ್ದಿದೆ. ಅದೃಷ್ಟವಶಾತ್ ಕಾರಿನ ಎರಡು ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ತಕ್ಷಣ ಮಾಜಿ ಶಾಸಕರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net