ಆಟೋ ಕಮರಿಗೆ ಉರುಳಿಬಿದ್ದು ಚಾಲಕ ಮೃತ್ಯು

Auto
Published on

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾನೀರುವಿನಲ್ಲಿ ಸೋಮವಾರ ರಾತ್ರಿ ಆಟೋರಿಕ್ಷಾ ಕಮರಿಗೆ ಉರುಳಿ ಬಿದ್ದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನ ಸಮೀಪದ ನಿವಾಸಿ ಆನಂದ್ ಸಫಲ್ಯ(70) ಮೃತರು. ಸೋಮೇಶ್ವರ ದೇವಸ್ಥಾನದ ಬಳಿ ಪಾರ್ಕ್‌ನಲ್ಲಿ ಆಟೋ ಚಲಾಯಿಸುತ್ತಿದ್ದ ಆನಂದ್ ಸೋಮವಾರ ರಾತ್ರಿ ಬಾಡಿಗೆ ಹೋಗಿದ್ದು, ಹಿಂದಿರುಗಿ ಬರುತ್ತಿದ್ದ ಸಂದರ್ಭ ಪಾನೀರು ಅಸ್ಸಿಸಿ ಶಾಲೆ ಬಳಿ ತಲುಪಿದಾಗ ನಿಯಂತ್ರಣ ಕಳೆದುಕೊಂಡ ಆಟೋ ಕಮರಿಗೆ ಬಿದ್ದಿದೆ. ಆಟೋ ರಿಕ್ಷಾದ ಕಬ್ಬಿಣದ ಸಲಾಕೆಗಳ ಏಟು ತಲೆಗೆ ತಗುಲಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net