

ವಿಜಯಪುರ: ನಗರದ ಕಂದಗಲ್ಲ ಹನುಮಂತರಾಯ ರಂಗ ಮಂದಿರದಲ್ಲಿ ಬೆಂಗಳೂರಿನ ಸ್ಪಂದನಾ ಕಲಾ ತಂಡದಿಂದ ಭಾನುವಾರ ಸಂಜೆ ಪ್ರದರ್ಶನಗೊಂಡ ಚಂದ್ರಶೇಖರ ಕಂಬಾರ ವಿರಚಿತ ಕರಿಮಾಯಿ ನಾಟಕ ಜನಮನ ಸೂರೆಗೊಂಡಿತು.
ಯುವ ಪರಿಷತ್, ಎಸ್‌ಪಿ ಎಂಟರ್ ಪ್ರೈಸಸ್, ಇವೆಂಟ್ರಾ ಇಂಟರ್‌ನ್ಯಾಷನಲ್ ಇವರ ಸಹಯೋಗ ಹಾಗೂ ವೇದ ಅಕಾಡಮಿ, ರಿಶ್ವಿಕ್ ಆಫ್ಟಿಕಲ್ಸ್, ರೂಢಗಿ ಡೆವೆಲಪರ್ಸ್, ಹುಂಡೈ ಶೋರೂಮ್ ಪ್ರಾಯೋಜಕತ್ವ ಹಾಗೂ ಮಧುರ ತೈಲ ಕಂಬಾಗಿ, ಹೋಟೆಲ್ ರಾಮಕೃಷ್ಣ ಪ್ಯಾಲೇಸ್ ಇವರ ಸಹ ಪ್ರಾಯೋಜಕತ್ವದಲ್ಲಿ ನಾಟಕ ಪ್ರದರ್ಶನಗೊಂಡಿತು.
ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಯರನಾಳದ ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶರಣು ಸಬರದ ಹಾಗೂ ಮೋಹನ್ ಕಟ್ಟಿಮನಿ ನಿರ್ವಹಿಸಿದರು. ಪ್ರಕಾಶ ಮಠ, ಪ್ರೀತಿ ಮೋಹನ್ ಕಟ್ಟಿಮನಿ, ವೇದ ಅಕಾಡಮಿ ಸಂಸ್ಥಾಪಕ ಅಧ್ಯಕ್ಷ ಡಾ.ಶಿವಾನಂದ ಕೆಲೂರ, ಶಿವಾನಂದ ಮಗ್ಗದ, ದೇವರಾಜ್ ಶಾಸ್ತ್ರೀ, ಸಂಗಮೇಶ ಹೊಸಮನಿ, ಶಾಂತು ದೊಡ್ಡಮನಿ, ನಿರೂಪಕಿ ಸಾನಿಯಾ, ಬಿ.ಎಸ್. ಬಿರಾದಾರ, ಸೀಮಾ ಟಕ್ಕಣ್ಣವರ, ವಿಶ್ವನಾಥ ಬಿರಾದಾರ, ಡಾ. ಸುನಿಲ್ ರಾಠೋಡ ಮತ್ತಿತರರಿದ್ದರು.
ಖ್ಯಾತ ರಂಗ ನಿರ್ದೇಶಕಿ ಬಿ. ಜಯಶ್ರೀ, ಚಿತ್ರ ನಟ ರಮೇಶ ಪಂಡಿತ್ ಮತ್ತು ಸಹಕಾಲಾವಿದರು ಮನೋಜ್ಞವಾಗಿ ಅಭಿನಯಿಸಿದರು