ಎಲ್ಲರಲ್ಲೂ ಮಂದಹಾಸ ಮೂಡಿಸುವ ವೈದ್ಯರು

bhr 1 (8)
Published on

ಬಾಳೆಹೊನ್ನೂರು: ಮನುಷ್ಯನ ಹುಟ್ಟು ಸಾವಿನ ನಡುವೆ ಉತ್ತಮ ಆರೋಗ್ಯಕ್ಕಾಗಿ ಶ್ರಮಿಸುವವರೆ ವೈದ್ಯರಾಗಿದ್ದಾರೆ ಎಂದು ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಕೆ.ಎಂ.ರಾಘವೇಂದ್ರ ಹೇಳಿದರು.

ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟದಿಂದ ಅಂತರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಹಿರಿಯ ವೈದ್ಯ ಡಾ.ಕೆ.ಗೋಪಾಲಕೃಷ್ಣ ಭಟ್ ಅವರನ್ನು ಸನ್ಮಾನಿಸಿ ಮಾತನಾಡಿ, ಅನಾರೋಗ್ಯ ಪೀಡಿತನಾದ ವ್ಯಕ್ತಿಗೆ ಉತ್ತಮ ಆರೋಗ್ಯ ದೊರೆಯುವಂತೆ ತಮ್ಮ ಜ್ಞಾನ ಧಾರೆಯೆರೆದು ಉತ್ತಮ ಆರೋಗ್ಯ ನೀಡುತ್ತಾರೆ. ಮನುಷ್ಯರು ಉತ್ತಮ ಜೀವನ ನಡೆಸಲು ದಾರಿ ತೋರಲು ದೇವರು ಕೆಲವರಿಗೆ ಮಾತ್ರ ಉತ್ತಮ ಅಧಿಕಾರ ಕೊಟ್ಟಿದ್ದು, ಇದರಲ್ಲಿ ವೈದ್ಯ ವೃತ್ತಿಯೂ ಪ್ರಮುಖವಾಗಿದೆ. ಎಂದರು.

ನಿರ್ಮಾಪಕ ಮಂಜುನಾಥ್ ತುಪ್ಪೂರು ಮಾತನಾಡಿ, ಯಾವುದೇ ವ್ಯಕ್ತಿಗೆ ಆರೋಗ್ಯ ಹದಗೆಟ್ಟಾಗ ವೈದ್ಯರು ದೇವರ ರೂಪದಲ್ಲಿ ಬಂದು ಸಲಹೆ, ಔಷಧಿಗಳನ್ನು ನೀಡಿ ಸಂತೈಸಿ ಆರೋಗ್ಯ ಸುಧಾರಿಸುವಂತೆ ಮಾಡುತ್ತಾರೆ. ಕೆ.ಜಿ.ಭಟ್ ಅವರು ರೋಗಿಗಳಿಗೆ ಧೈರ್ಯ ತುಂಬಿ, ಸಂತೈಸಿ ಮನೆ ಮಕ್ಕಳಂತೆ ಆರೈಕೆ ಮಾಡಿ ರೋಗಿಯ ಖಾಯಿಲೆ ವಾಸಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.

ಕಾಫಿ ಬೆಳೆಗಾರ ರೆನ್ನಿ ದೇವಯ್ಯ, ಆಯುಷ್ ವೈದ್ಯಾಧಿಕಾರಿ ಗಣೇಶ್‌ಭಟ್, ಜೇಸಿಐ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷಭಟ್, ಪ್ರಮುಖರಾದ ಪ್ರಸನ್ನಾ ಜಿ.ಭಟ್, ಶೇಖರ್ ಇಟ್ಟಿಗೆ, ರಾಜೇಶ್ವರಿ, ಲೀಲಾ ರವಿಕುಮಾರ್, ಸದಾಶಿವ, ಬಿ.ಎಸ್.ನಾಗರಾಜಭಟ್, ಪ್ರವೀಣ್‌ಕುಮಾರ್, ಸಾಕ್ಷಿ ಸದಾಶಿವ, ಅವನಿ ತೇಜಸ್ವಿನಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net