

ರಾಯಚೂರು: ಬಾಲಕನ ಶ್ವಾಸಕೋಶದಲ್ಲಿದ್ದ ಗುಂಡು ಸೂಜಿಯನ್ನು ರಿಮ್ಸ್ ಆಸ್ಪತ್ರೆಯ ವೈದ್ಯರು ಬ್ರಾಂಕೋಸ್ಕೋಪಿ ಶಸ ಚಿಕಿತ್ಸೆ ನಡೆಸುವ ಮೂಲಕ ಶನಿವಾರ ಯಶಸ್ವಿಯಾಗಿ ತೆಗೆದು ಬಾಲಕನ ಪ್ರಾಣವನ್ನು ಉಳಿಸಿದ್ದಾರೆ.
ಜಿಲ್ಲೆಯ ಸಿರವಾರ ತಾಲೂಕಿನ ಮುಚ್ಚಳ ಕ್ಯಾಂಪ್‌ನ 13 ವರ್ಷದ ಶಿವಕುಮಾರ ಶಾಲೆಯಲ್ಲಿ ಆಟವಾಡುವಾಗ ಗುಂಡು ಸೂಜಿಯನ್ನು ಬಾಯಿಯಲ್ಲಿ ಇಟ್ಟುಕೊಂಡಿದಾಗ ಆಕಸ್ಮಿಕವಾಗಿ ನುಂಗಿದ್ದಾರೆ. ಗುಂಡು ಸೂಚಿ ಶ್ವಾಸಕೋಶದೊಳಗೆ ಸೇರಿತ್ತು.
ಬಾಲಕನನ್ನು ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದ್ದಿದ್ದು, ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದಾಗ ಬಾಲಕನ ಬಲ ಶ್ವಾಸಕೋಶದೊಳಗೆ ಗುಂಡು ಸೂಜಿ ಇರುವುದು ಕಂಡು ಬಂದಿದ್ದು, ವೈದ್ಯರು ಕಠಿಣ ಶಸ ಚಿಕಿತ್ಸೆ ಮೂಲಕ ಸೂಜಿಯನ್ನು ಹೊರತೆಗೆದಿದ್ದಾರೆ.
ಶಸಚಿಕಿತ್ಸೆಯಲ್ಲಿ ವೈದ್ಯರಾದ ಡಾ.ಅರವಿಂದ ಸಂಗಾವಿ, ಡಾ.ಕಿರಣ ನಾಯಕ, ಡಾ.ಮಲ್ಲಿಕಾರ್ಜುನ ಪಾಟೀಲ್, ಡಾ.ಸಿಂಧು, ಡಾ.ಇಂದುಮತಿ, ತಾಂತ್ರಿಕ ಸಿಬ್ಬಂದಿಗಳಾದ ಅಮರೇಶ ಸಕ್ರಿ, ಲಿಂಗರಾಜ್ ಸಮುನ್ ಕ್ಲಾರಿ, ನಾರಾಯಣ, ಶಂಕರ ಕೈಜೋಡಿಸಿದ್ದರು.