ಧರ್ಮ ದೈವದ ನೇಮೋತ್ಸವ ಸಂಪನ್ನ

15sunti03
ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ನೇರವೇರಿದ್ದ ನೇಮೋತ್ಸವದಲ್ಲಿ ದೈವಗಳ ಕೋಲಗಳು ನಡೆದವು.
Published on

ಸುಂಟಿಕೊಪ್ಪ: ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ 36ನೇ ವರ್ಷದ ಧರ್ಮ ದೈವದ ನೇಮೋತ್ಸವ ಮಂಗಳವಾರ ಸಂಪನ್ನಗೊಂಡಿತು.

ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ಧರ್ಮ ದೈವದ ನೇಮೋತ್ಸವದ ಅಂಗವಾಗಿ ಸೋಮವಾರ ದೇವಾಲಯದ ಆವರಣದ ವ್ಯಾಪ್ತಿಯಲ್ಲಿ ತಳಿರು ತೋರಣ, ವಿದ್ಯುತ್ ದೀಪಾಗಳಿಂದ ಸಿಂಗಾರಿಸಲಾಗಿತು. ರಾತ್ರಿ 8 ಗಂಟೆಗೆ ಭಂಡಾರ ಮೆರವಣಿಗೆ, 8.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ರಾತ್ರಿ 9 ಗಂಟೆಗೆ ಅನ್ನದಾನ 10ಗಂಟೆಗೆ ಆಧಿದೇವತೆ ಕಲ್ಲುರ್ಟಿ(ಪಾಷಣಮೂರ್ತಿ) ದೈವದ ನೇಮೋತ್ಸವವು ನಡೆದು ಭಕ್ತಾಧಿಗಳಿಗೆ ದರ್ಶನ ನೀಡಿತು. ನಂತರ ಭಕ್ತಾದಿಗಳಿಗೆ ಗಂಧ ಪ್ರಸಾದ ವಿತರಿಸಲಾಯಿತು. ರಾತ್ರಿ 1 ಗಂಟೆಗೆ ಧರ್ಮ ದೈವವಾದ ಅಣ್ಣಪ್ಪ, ಪಂಜುರ್ಲಿ ದೈವದ ಗಗ್ಗರ ಸೇವೆ ನೇಮವು ನೇರವೇರಿತು.

ಮಂಗಳವಾರ ಮುಂಜಾನೆ 5 ಗಂಟೆಗೆ ಚಾಮುಂಡೇಶ್ವರಿ ಹಾಗೂ ಬಲ ಬಂಟ ಗುಳಿಗ ರಾಜ ದೈವದ ಜೋಡಿ ಕೋಲವು ಬೆಳಗ್ಗೆ 8 ಗಂಟೆಯವರೆಗೆ ನಡೆಯಿತು. ಧರ್ಮ ದೈವಕ್ಕೆ ಆರ್ಪಣೆಯನ್ನು ನೀಡಲಾಯಿತು. 9 ಗಂಟೆಗೆ ಧರ್ಮ ದೈವದ ಹರಕೆ, ಬೇಡಿಕೆಗಳನ್ನು ಭಕ್ತಾದಿಗಳು ಆರ್ಪಿಸಿದರು. ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಂತರ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಮಾಡಲಾಯಿತು.

ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪಸ್ವಾಮಿ ದೇವಾಲಯ ಪ್ರಮುಖರಾದ ಬಿ.ಡಿ.ರಾಜು ರೈ ಹಾಗೂ ಶಿವಪ್ರಸಾದ್‌ರೈ ಕುಟುಂಬಸ್ಥರು ಇದ್ದರು. ವಿರಾಜಪೇಟೆ, ಸಿದ್ಧಾಪುರ ಕುಶಾಲನಗರ ಹಾಗೂ ನೆರೆಯ ಜಿಲ್ಲೆಯ ಸುಳ್ಯ, ಪುತ್ತೂರು ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net