ಇಡಿ ರಾಜ್ಯಕ್ಕೆ ಸಕ್ಕರೆ ಪೂರೈಸುವ ಸಾಮರ್ಥ್ಯ ಜಿಲ್ಲೆಗಿದೆ

HHP INVA
ಹೂವಿನಹಿಪ್ಪರಗಿಯ ಗ್ರಾಮದ ತಾಳಿಕೋಟೆ ಬಂಧುಗಳ ವಿಶ್ವ ಗುರು ಇಂಡಸ್ಟ್ರೀಸ್ ವತಿಯಿಂದ ತೊಗರಿ ಬೇಳೆ ಉತ್ಪಾದನ ಘಟಕದ ಉದ್ಘಾಟನೆಯನ್ನು ಸಕ್ಕರೆ ಸಚಿವ ಶಿವಾನಂದ ಎಸ್. ಪಾಟೀಲ ಮಾಡಿದರು. ಗುರುಕುಲ ಭಾಸ್ಕರ ಪಂಚಾಚಾರ್ಯ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಇಂಗಳೇಶ್ವರದ ಚನ್ನಬಸವ ಮಹಾಸ್ವಾಮಿಗಳು, ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ), ಎಲ್. ಎನ್. ಅಗರವಾಲ, ಪೃಥ್ವಿಗೌಡ ನಾಡಗೌಡ ಇತರರಿದ್ದರು.
Published on

ಹೂವಿನಹಿಪ್ಪರಗಿ: ತೊಗರಿ ಬೆಳೆ ಕೇವಲ ಗುಲಬುರ್ಗಾಕ್ಕೆ ಸೀಮಿತವಾಗದೆ ಕಾಲಕ್ರಮೇಣ 1990 ನಂತರ ತೊಗರಿ ಬೆಳೆಯನ್ನು ಇಡಿ ನಮ್ಮ ವಿಜಯಪುರ ಜಿಲ್ಲೆಯಲ್ಲಿ ಬೆಳೆ ಬೆಳೆಯುತ್ತಿದ್ದಾರೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದರು.

ಹೂವಿನಹಿಪ್ಪರಗಿಯ ಗ್ರಾಮದ ತಾಳಿಕೋಟಿ ಬಂಧುಗಳ ವಿಶ್ವ ಗುರು ಇಂಡಸ್ಟ್ರೀಸ್ ವತಿಯಿಂದ ತೊಗರಿ ಬೇಳೆ ಉತ್ಪಾದನೆ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ತೊಗರಿಯನ್ನು ಸಂರಕ್ಷಣೆ ಮಾಡಿ ಅದರಿಂದ ಬೇಳೆ ಮಾಡುವಂತ ಜಿಲ್ಲೆಗಳಲ್ಲಿ ಗುಲಬರ್ಗಾ, ಬೀದರವೂ ಸೇರಿದ್ದವು. ಸದ್ಯ ನಮ್ಮ ವಿಜಯಪುರ ಜಿಲ್ಲೆಯೂ ಇರುವುದು ಸಂತಸದ ವಿಷಯ ಎಂದರು.

ನಮ್ಮ ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಪೇರು, ದಾಳಿಂಬೆ, ದ್ರಾಕ್ಷಿ ಸೇರಿ ವಿವಿಧ ಬೆಳೆ ಬೆಳೆಯಲು ಪ್ರಸಿದ್ಧವಾಗಿದೆ. ಇಡಿ ರಾಜ್ಯದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಜಿಲ್ಲೆಗಳಲ್ಲಿ ಬೆಳಗಾವಿ ಬಿಟ್ಟರೆ ವಿಜಯಪುರವೂ ಒಂದಾಗಿದೆ. ಜಿಲ್ಲೆಯಲ್ಲಿ 24 ಸಕ್ಕರೆ ಕಾರ್ಖಾನೆಗಳಿವೆ. ರಾಜ್ಯಕ್ಕೆ ಬೇಕಾಗುವಷ್ಟು ಸಕ್ಕರೆಯನ್ನು ನಮ್ಮ ಜಿಲ್ಲೆಯಿಂದಲೇ ಕೊಡುವ ಸಾಮರ್ಥ್ಯ ನಮಗಿದೆ. ಒಂದು ಕಾಲದಲ್ಲಿ ನಮ್ಮ ಜಿಲ್ಲೆ ಬರ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿತ್ತು. ಬರ ಬಿದ್ದ ಸಮಯದಲ್ಲಿ ನಮ್ಮವರು ಮಹಾರಾಷ್ಟ್ರ ರಾಜ್ಯಕ್ಕೆ ಗುಳೆ ಹೋಗುವ ಪರಿಸ್ಥಿತಿ ಇತ್ತು . ಈಗ ಕಾಲ ಬದಲಾಗಿದ್ದು, ಮಹಾರಾಷ್ಟ್ರದವರಿಗೇ ನಾವು ಕೆಲಸ ಕೊಡುವ ಮಟ್ಟಕ್ಕೆ ಬೆಳೆದಿದ್ದೇವೆ ಎಂದರು.

ಗುರುಕುಲ ಭಾಸ್ಕರ ಪಂಚಾಚಾರ್ಯ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಇಂಗಳೇಶ್ವರದ ಚನ್ನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ), ಎಲ್. ಎನ್. ಅಗರವಾಲ, ಪೃಥ್ವಿಗೌಡ ನಾಡಗೌಡ, ಗುರುಸಿದ್ದಪ್ಪ ತಾಳಿಕೋಟೆ, ಐ.ಸಿ. ಪಟ್ಟಣಶೆಟ್ಟಿ, ಶಿವಾನಂದ ತಾಳಿಕೋಟಿ, ರಾಚಪ್ಪ ಬ್ಯಾಕೋಡ, ಬಿ.ಎಸ್. ಪಾಟೀಲ ಯಾಳಗಿ, ಸಂಗಮೇಶ ಹಳ್ಳೂರ, ನಿಂಗಣ್ಣ ಶಿವಯೋಗಿ, ಮುರುಗೇಶ ತಾಳಿಕೋಟಿ, ಚಂದಪ್ಪ ಗುಂಡಾನವರ, ಸಿದ್ದು ಹಾದಿಮನಿ, ಪ್ರಕಾಶ ಉಮರ್ಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net