ನರೇಗಲ್ಲ ಪ.ಪಂ. ಸದಸ್ಯ ಸ್ಥಾನ ರದ್ದು ಕೋರಿದ್ದ ಪ್ರಕರಣ,ವಿಚಾರಣೆ ಮುಂದೂಡಿದ ಜಿಲ್ಲಾಧಿಕಾರಿ ನ್ಯಾಯಾಲಯ

4NRGL2- pattana panchayat
Published on

ನರೇಗಲ್ಲ: ನರೇಗಲ್ಲ ಪಟ್ಟಣ ಪಂಚಾಯಿತಿಯ 2ನೇ ಅವಧಿಗೆ ಸೆ. 2ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಕಾಂಗ್ರೆಸ್ ಸದಸ್ಯರನ್ನು ಬೆಂಬಲಿಸಿದವರ ಸದಸ್ಯತ್ವ ರದ್ದುಗೊಳಿಸುವಂತೆ ಬಿಜೆಪಿಯಿಂದ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿದ್ದ 6 ಸದಸ್ಯರ ವಿರುದ್ಧದ ದೂರಿನ ವಿಚಾರಣೆಯನ್ನು ಜ. 9ಕ್ಕೆ ಮೂಂದೂಡಲಾಗಿದೆ.

ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ತೋಟಪ್ಪ (ರಾಜು) ಕುರಡಗಿ ಅವರು ನರೇಗಲ್ಲ ಪಟ್ಟಣ ಪಂಚಾಯಿತಿಯ 6ನೇ ವಾರ್ಡ್​ನ ಸದಸ್ಯೆ ವಿಜಯಲಕ್ಷ್ಮೀ ಚಲವಾದಿ, 12ನೇ ವಾರ್ಡಿನ ಸದಸ್ಯ ಮಲ್ಲಿಕಸಾಬ್ ರೋಣದ, 13ನೇ ವಾರ್ಡಿನ ಸದಸ್ಯ ಈರಪ್ಪ ಜೋಗಿ, 14ನೇ ವಾರ್ಡಿನ ಸದಸ್ಯ ಫಕೀರಪ್ಪ ಬಂಬ್ಲಾಪುರ, 15ನೇ ವಾರ್ಡ್ ಸದಸ್ಯ ಫಕೀರಪ್ಪ ಮಳ್ಳಿ, 17ನೇ ವಾರ್ಡಿನ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಅವರ ವಿರುದ್ಧ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಕಾಯ್ದೆ 1987ರ ಕಲಂ 4ರಡಿ ಸದಸ್ಯತ್ವ ರದ್ದು ಪಡಿಸುವಂತೆ ಪ್ರಕರಣ ದಾಖಲಿಸಿದ್ದರು. ಜ. 2ರಂದು ವಿಚಾರಣೆಗೆ ಹಾಜರಾಗುವಂತೆ ಸದಸ್ಯರಿಗೆ ನೋಟಿಸ್ ನೀಡಲಾಗಿತ್ತು. ಜ. 2ರಂದು ಸದಸ್ಯರು ತಮ್ಮ ವಕೀಲರ ಮೂಲಕ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದರು. ಆದರೆ, ವಿಚಾರಣೆಯ ದಿನಾಂಕವನ್ನು ಜ. 9ಕ್ಕೆ ಮುಂದೂಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net