ಎಸ್ಪಿ ಪೋನ್‌ಇನ್‌ನಲ್ಲಿ ಜಿಲ್ಲಾಧಿಕಾರಿಯೂ ಭಾಗಿ

Screenshot_2023-06-09-20-20-34-07.jpg
Published on

ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಮ್ಮಿಕೊಳ್ಳುತ್ತಿರುವ ಫೋನ್ ಇನ್ ಕಾರ್ಯಕ್ರಮಕ್ಕೆ ಜಿಲ್ಲೆಯ ಜನರ ಪ್ರಸಂಶೆಗೆ ಪಾತ್ರವಾಗಿದೆ. 13ನೇ ಪೋನ್ ಇನ್ ಜೂ. 10ರಂದು ಬೆಳಗ್ಗೆ 9ರಿಂದ ಬೆಳಗ್ಗೆ 11 ಗಂಟೆವರೆಗೆ ನಡೆಯಲಿದ್ದು, ಈ ಪೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯೂ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ 13ನೇ ಫೋನ್ ಇನ್ ಕಾರ್ಯಕ್ರಮ ಹೆಚ್ಚು ಮಹತ್ವ ಪಡೆದಿದೆ. ಈ ಫೋನ್ ಇನ್ ಕಾರ್ಯಕ್ರಮದಿಂದ ಜಿಲ್ಲೆಯ ಬಹಳಷ್ಟು ಸಮಸ್ಯೆ ಒಂದು ಪೋನ್ ಕರೆಯಿಂದ ನಿವಾರಣೆಯಾಗಿವೆ. ಶನಿವಾರ ನಡೆಯುವ ಪೋನ್ ಇನ್‌ನಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ನಗರ ಪೊಲೀಸ್ ಡಿಸಿಪಿ ಉಪಸ್ಥಿತರಿರುವರು. ಅಕ್ರಮ ಸರಾಯಿ, ಮರಳು ಸಾಗಾಟ, ಶಾಲಾ ಆವರಣದಲ್ಲಿ ತಂಬಾಕು, ಮಟ್ಕಾ, ಕೌಂಟುಂಬಿಕ ಸಮಸ್ಯೆ, ಕಳ್ಳತನ ಪ್ರಕರಣ, ಸಂಚಾರ ಸಮಸ್ಯೆ ಇನ್ನಿತರೆ ಸಮಸ್ಯೆಗಳಿದ್ದರೆ ಸಾರ್ವಜನಿಕರು ದೂ: 0831 2405226ಗೆ ಕರೆ ಮಾಡಿ ದೂರು ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net