

ಕೋಲಾರ: ತಾಲೂಕಿನ ಸುಗಟೂರು ಹೋಬಳಿಯ ಕೆಂಬತ್ತನಹಳ್ಳಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ, ಕೆರೆಯ ಜಾಗಕ್ಕೆ ಸೃಷ್ಟಿ ಮಾಡಿಕೊಂಡಿದ್ದ ಮ್ಯುಟೇಷನ್‌ಅನ್ನು ಉಪವಿಭಾಗಾಧಿಕಾರಿ ರದ್ದುಗೊಳಿಸಿ ಆದೇಶಿಸಿದ್ದಾರೆ.
ಸುಗಟೂರು ಹೋಬಳಿಯ ಕೆಂಬತ್ತನಹಳ್ಳಿಯ ಸರ್ವೇ ನಂ.42ರಲ್ಲಿ 11.08 ಎಕರೆ ವಿಸ್ತೀರ್ಣವುಳ್ಳ ಕೆರೆಯ ಪ್ರದೇಶದಲ್ಲಿ 5 ಎಕರೆಗೂ ಭೂಮಿಯನ್ನು ಪ್ರಭಾವಿಗಳು ಒತ್ತುವರಿ ವಾಡಿಕೊಂಡಿದ್ದರಲ್ಲದೆ, ಕೆಲವರು ತಮ್ಮ ಪ್ರಭಾವ ಬಳಸಿ ಅಕ್ರಮ ದಾಖಲೆ ಸೃಷ್ಟಿಸಿಕೊಂಡಿದ್ದರು.
ಈ ಬಗ್ಗೆ ರೈತ ಸಂದ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ನಳಿನಿಗೌಡ ಅವರು ಲೋಕಾಯುಕ್ತದಲ್ಲಿ ಕೆರೆ ಒತ್ತುವರಿ ತೆರವುಗೊಳಿಸುವಂತೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ಸೂಚನೆ ಮೇರೆಗೆ ಎಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು, ಅಕ್ರಮವಾಗಿ ಸೃಷ್ಟಿಸಿಕೊಂಡಿದ್ದ ದಾಖಲೆಗಳನ್ನು 2022 ರಲ್ಲೇ ಉಪವಿಭಾಗಾಧಿಕಾರಿ ರದ್ದುಗೊಳಿಸಿ ಆದೇಶಿಸಿದ್ದರು. ಆದೇಶ ನೀಡಿದ್ದರೂ ತಾಲೂಕು ಆಡಳಿತ ಕೆರೆ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅವರಿಗೆ ಲೋಕಾಯುಕ್ತ ಮುಂದೆ ಖುದ್ದು ಹಾಜರಾಗಲು ಸೂಚನೆ ನೀಡಲಾಗಿತ್ತು.
ಇದರಿಂದ ಎಚ್ಚೆತ್ತುಕೊಂಡ ತಾಲೂಕು ಕಚೇರಿ ಅಧಿಕಾರಿಗಳು ಎರಡು ದಿನಗಳ ಹಿಂದೆ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದು, ಕೆರೆಯನ್ನು ಸರ್ವೇ ವಾಡಿ ಜೆಸಿಬಿ ಮೂಲಕ ಟ್ರಂಚ್ ಹೊಡೆಸಿ ಒತ್ತುವರಿ ತೆರವುಗೊಳಿಸಿದ್ದಾರೆ. ಪುನಃ ಒತ್ತುವರಿ ವಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಕೆರೆ ಒತ್ತುವರಿ ತೆರವುಗೊಳಿಸಿ ಬಯೋಫೆನ್ಸಿಂಗ್ ಅಳವಡಿಕೆ ವಾಡುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದು, ಅದರಂತೆ ತಾಲೂಕಿನಲ್ಲಿರುವ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೆರೆ, ಕಾಲುವೆಗಳ ಒತ್ತುವರಿ ತೆರವುಗೊಳಿಸಲಾಗುವುದು.ಹರ್ಷವರ್ಧನ್ನಿರ್ಗಮಿತ ತಹಸೀಲ್ದಾರ್, ಕೋಲಾರ ಸತತ ನಾಲ್ಕು ವರ್ಷಗಳ ಹೋರಾಟದ ಫಲವಾಗಿ ಕೊನೆಗೂ ಅಧಿಕಾರಿಗಳು ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಒತ್ತುವರಿಯಾಗುವುದನ್ನು ತಡೆಯಬೇಕಿದೆ. ಕೆರೆಗೆ ನೀರು ಹರಿದು ಬರುವ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಆದ್ಯತೆ ನೀಡಬೇಕಿದೆ.ನಳಿನಿಗೌಡ ರೈತ ಸಂಘದ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ