ಸಾಧಕ ವಿದ್ಯಾರ್ಥಿಗಳಿಂದ ಹುಟ್ಟೂರಿನ ಘನತೆ ಹೆಚ್ಚಳ

17kkr2(8-25 club
ಕಿಕ್ಕೇರಿಯಲ್ಲಿ ಫ್ರೆಂಡ್ಸ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೋಡಿಮಾರನಹಳ್ಳಿ ಕೃಷ್ಣೇಗೌಡ, ಜಯರಾಮು, ಎಸ್. ರವಿ, ಕೆ.ಪಿ. ಉಮೇಶ್, ಲಿಂಗರಾಜೇಗೌಡ, ಎಸ್‌ಟಿಡಿ ರಮೇಶ್, ರಂಗಶೆಟ್ಟಿ, ಕೆ.ಕೆ. ಚಂದ್ರಶೇಖರ್, ಸೀತಾರಾಮು, ದೇವರಾಜು, ಚಿಕ್ಕೇಗೌಡ ಇತರರು ಇದ್ದರು.
Published on

ಕಿಕ್ಕೇರಿ: ಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಶೈಕ್ಷಣಿಕವಾಗಿ ಮುಂದುವರಿಯಲು ಸಹಕಾರ ನೀಡಿದರೆ ಭವಿಷ್ಯದ ಸತ್ಪ್ರಜೆಗಳಾಗಿ ಹೊರಹೊಮ್ಮಲಿದ್ದಾರೆ ಎಂದು ಫ್ರೆಂಡ್ಸ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಕೋಡಿಮಾರನಹಳ್ಳಿ ಕೃಷ್ಣೇಗೌಡ ಹೇಳಿದರು.

ಇಲ್ಲಿನ ಫ್ರೆಂಡ್ಸ್ ರಿಕ್ರಿಯೇಷನ್ ಕ್ಲಬ್ ಇತ್ತೀಚೆಗೆ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ನಿಮ್ಮ ಸಾಧನೆ ನಮ್ಮ ಹಳ್ಳಿಯ ಹೆಮ್ಮೆ. ಮುಂದಿನ ದಿನದಲ್ಲಿ ಮತ್ತಷ್ಟು ಶ್ರಮಿಸಿ ಉನ್ನತ ಶಿಕ್ಷಣನ್ನು ಮುಂದಿನ ಹಂತಗಳಲ್ಲಿ ಇನ್ನಷ್ಟು ಶ್ರಮಿಸಿ ಉನ್ನತ ಶಿಕ್ಷಣದ ಕಡೆಗೆ ಹೆಜ್ಜೆ ಇಡಿ. ಈ ಸಾಧನೆ ಪಾಲಕರು, ಓದಿದ ಶಾಲೆ, ಹುಟ್ಟಿದ ಊರಿನ ಘನತೆ ಹೆಚ್ಚಿಸಲಿದೆ ಎಂದು ತಿಳಿಸಿದರು.

ಕಠಿಣ ಪರಿಶ್ರಮ, ಶಿಸ್ತು, ಸಮಯಪಾಲನೆ, ಆತ್ಮವಿಶ್ವಾಸ ಯಶಸ್ಸಿನ ಹಾದಿಯಾಗಿದೆ. ಅಂಕದೊಂದಿಗೆ ಉತ್ತಮ ನಡವಳಿಕೆ, ಸಂಸ್ಕಾರ ಪಾಲಕರ ಕೀರ್ತಿ ಹೆಚ್ಚಿಸಲಿದೆ. ಗುರಿ ಇಟ್ಟು ಇಷ್ಟಪಟ್ಟು ಓದಿ. ತಮ್ಮ ಕ್ಲಬ್ ಸಹಕಾರ ಸದಾ ಇದೆ ಎಂದು ಹುರಿದುಂಬಿಸಿದರು.

ನಾವು ನೀಡುವ ನಗದು ಪುರಸ್ಕಾರ ತಮ್ಮನ್ನು ಗೌರವದಿಂದ ಹರಸಲಿದೆ. ಬಡಮಕ್ಕಳಿಗೆ ಆಸರೆಯಾಗಲಿ ಎಂಬ ಇಚ್ಛೆಯಿಂದ ಶಾಲಾ ಮಕ್ಕಳನ್ನು ಉತ್ತೇಜಿಸುವ ಕೆಲಸ ಕ್ಲಬ್ ಮಾಡುತ್ತಿದೆ. ಕೇವಲ ರಿಕ್ರಿಯೇಷನ್‌ಗಾಗಿ ತಮ್ಮ ಸಂಸ್ಥೆ ಮೀಸಲಾಗದೆ ಜನಪರ ಕಲ್ಯಾಣಕ್ಕೆ ಮುಂದಿನ ದಿನದಲ್ಲಿ ಮತ್ತಷ್ಟು ಶ್ರಮಿಸಲು ಹಲವು ಯೋಜನೆ ರೂಪಿಸಿಕೊಂಡಿದೆ ಎಂದು ನುಡಿದರು.

ವಿದ್ಯಾರ್ಥಿಗಳಾದ ಮಮತಾ, ಗಾನವಿ, ಅಮೃತಾ, ಕೀರ್ತನಾ, ಶ್ವೇತಾ, ಕಾವ್ಯಾಗೆ ನಗದು ಪುರಸ್ಕಾರ ನೀಡಲಾಯಿತು.

ಕ್ಲಬ್ ಉಪಾಧ್ಯಕ್ಷ ಜಯರಾಮು, ಕಾರ್ಯದರ್ಶಿ ಎಸ್. ರವಿ, ಖಜಾಂಚಿ ಕೆ.ಪಿ. ಉಮೇಶ್, ನಿರ್ದೇಶಕ ನೀಲಕಂಠಯ್ಯ, ಲಿಂಗರಾಜೇಗೌಡ, ಬಾಲಚಂದ್ರ, ಎಸ್‌ಟಿಡಿ ರಮೇಶ್, ರಂಗಶೆಟ್ಟಿ, ಕೆ.ಕೆ. ಚಂದ್ರಶೇಖರ್, ಸೀತಾರಾಮು, ದೇವರಾಜು, ಚಿಕ್ಕೇಗೌಡ, ಮುಕುಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net