ಪಾಲಕರ ಘನತೆ ಮಕ್ಕಳ ನಡತೆ ಮೇಲೆ ಅವಲಂಬಿತ

The dignity of parents depends on the behavior of their children.
ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಜೈನಮುನಿ ಆಚಾರ್ಯ ಶ್ರೀ ಕುಲರತ್ನಭೂಷಣ ಮಹಾರಾಜರು ಪ್ರವಚನ ನೀಡಿದರು. ಆರೀಕ ದರ್ಶನ ಭೂಷಣಮತಿ ಮಾತಾ, 105 ಧರ್ಮಭೂಷಣ ಮಹಾರಾಜರು ಇದ್ದರು.
Published on

ರಬಕವಿ-ಬನಹಟ್ಟಿ: ವಿಪರೀತ ಮೊಬೈಲ್ ಬಳಕೆಯಿಂದ ಯುವ ಪೀಳಿಗೆ ದಾರಿ ತಪ್ಪುತ್ತಿದ್ದು, ತಂದೆ ತಾಯಿ ಘನತೆ, ಗೌರವ ಮಕ್ಕಳ ನಡತೆ ಮೇಲೆ ಅವಲಂಬಿತವಾಗಿದೆ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಆಚಾರ್ಯ ಶ್ರೀ ಕುಲರತ್ನಭೂಷಣ ಮಹಾರಾಜರು ಹೇಳಿದರು.

ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಭಾನುವಾರ ಪ್ರವಚನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ಪ್ರಾಥಮಿಕ ಶೈಕ್ಷಣಿಕ ಹಂತದಲ್ಲಿರುವಾಗ ಅವರು ಬೇಡಿದ್ದನ್ನು ಕೊಡುವುದು ತಪ್ಪಲ್ಲ. ಅದರ ಅವಶ್ಯಕತೆ ಅವರಿಗೆಷ್ಟಿದೆ ಎಂದು ಅರಿತು ಕೊಡಬೇಕು ಅಥವಾ ಕೊಡಲೇಬೇಕೆಂದರೆ ಅದನ್ನು ಕೊಟ್ಟಾದ ಮೇಲೆ ಆ ವಸ್ತುವಿನ ಮೇಲೆ ಪಾಲಕರಾದರೂ ಸದಾ ನಿಗಾ ಇಡಬೇಕು ಎಂದರು.

ಮಕ್ಕಳಿಗೆ ಅವರವರ ಧರ್ಮಾನುಸಾರ ಗುರುಗಳ ದರ್ಶನ ಮಾಡಿಸಿ ಸಂಸ್ಕಾರ, ಸಂಸ್ಕೃತಿ ಕೊಡಿಸುವ ಕೆಲಸವಾಗಬೇಕು. ಅಂದಾಗ ಮಾತ್ರ ಅವರು ದೇಶದ ಮಹಾನ್ ಪ್ರಜೆಗಳಾಗಬಲ್ಲರು. ಹೀಗೆ ಮೊಬೈಲ್ ಬಳಕೆಯಿಂದ ಆಗುವ ಅನೇಕ ದುಷ್ಪರಿಣಾಮಗಳ ಬಗ್ಗೆ ದೃಷ್ಟಾಂತಗಳನ್ನು ಹೇಳಿ ಭಕ್ತರಲ್ಲಿ ಜಾಗೃತಿ ಮೂಡಿಸಿದರು.

ಚಾತುರ್ಮಾಸ ಪೂರ್ತಿ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ಜರುಗಲಿದ್ದು, ತಾವು ಬನ್ನಿ ತಮ್ಮ ಮಕ್ಕಳನ್ನು ಇಲ್ಲಿ ಕರೆತಂದರೆ ಅವರಿಗೆ ಅಮೂಲ್ಯವಾದ ಸಂಸ್ಕಾರ, ಸಂಸ್ಕೃತಿ ದೊರಕುತ್ತದೆ ಎಂದರು.

ಮಹಾರಾಷ್ಟ್ರ, ಗೋವಾ ಹಾಗೂ ರಾಜ್ಯದ ಅನೇಕ ಕಡೆಗಳಿಂದ ಶ್ರಾವಕ ಶ್ರಾವಕಿಯರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net