ಕೃಷ್ಣನೂರಲ್ಲಿ 'ದಿ ಡೈಮಂಡ್​ ಫ್ಯಾಕ್ಟರಿ' ಶುಭಾರಂಭ

TDF Lead
Published on

ಉಡುಪಿಯಲ್ಲಿ ಟಿಡಿಎಫ್​ನ 7ನೇ ಶಾಖೆ ಉದ್ಘಾಟನೆ

ಚಿತ್ತಾಕರ್ಷಕ ವಜ್ರ-ಚಿನ್ನಾಭರಣಗಳ ಖಜಾನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಶದಲ್ಲಿ ವಜ್ರಾಭರಣ ಮಾರಾಟ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಿರುವ ದಿ ಡೈಮಂಡ್​ ಫ್ಯಾಕ್ಟರಿ (ಟಿಡಿಎಫ್​)ಯು ಕೃಷ್ಣನೂರು ಉಡುಪಿಯಲ್ಲಿ ನವರಾತ್ರಿ ಆರಂಭದ ಶುಭದಿನದಂದು ತನ್ನ ಹೊಸ ಶಾಖೆಯನ್ನು ಶುಭಾರಂಭಗೊಳಿಸಿದೆ.

ಉಡುಪಿ ನಗರದ ಹೃದಯ ಭಾಗದಲ್ಲಿರುವ ಗೀತಾಂಜಲಿ ರಸ್ತೆ ಮಾರ್ಗದಲ್ಲಿನ ಪಿವಿಎಸ್​ ಟವರ್​ (ಟಿವಿಎಸ್​ ಮೋಟಾರ್​ ಶೋರೂಂ ಮುಂಭಾಗ)ನಲ್ಲಿ ಗೋಲ್ಡ್​, ಡೈಮಂಡ್​, ಅನ್​ಕಟ್​, ಪ್ಲಾಟಿನಮ್​ ಹಾಗೂ ಸಿಲ್ವರ್​ ಆಭರಣಗಳ ಮಳಿಗೆ ತೆರೆದಿದೆ.

ಮಾದರಿ ಆಭರಣಗಳ ಸಂಗ್ರಹ

Jwel 1
Jwel 3
ಒಂದಕ್ಕಿಂತ ಇನ್ನೊಂದು ಆಕರ್ಷಕ ಶೈಲಿಯಲ್ಲಿ ಸಿದ್ಧಪಡಿಸಿರುವ ವಜ್ರಾಭರಣಗಳು ಖರೀದಿಗೆ ಆಗಮಿಸುವವರ ಮನ ಸೆಳೆಯುವಂತಿದೆ. ರಾಜಸ್ಥಾನಿ ಶೈಲಿಯ ಅನ್​ಕಟ್​ ಡೈಮಂಡ್​ (ಪೋಲ್ಕಿ), ತಮನ್ನಾ, ಅಮೋರ್​, ಲುಕ್ಸ್​ ಲೈಟ್​, ಮುಂಬಯಿ ಶೈಲಿಯ ಬ್ರೈಡಲ್​ ಜುವೆಲ್ಲರಿ ಹೀಗೆ ವಿವಿಧ ಆಭರಣಗಳ ಮಾದರಿ ಸಂಗ್ರಹವಿದೆ. ಬಂಗಾರದಲ್ಲಿ ನಕಾಶ್, ಕೆಂಪು, ಸಂಸ್ಕೃತಿ ಹೀಗೆ ವಿವಿಧ ವಿನ್ಯಾಸದ ಆಭರಣಗಳು ಲಭ್ಯವಿದೆ. ಬೆಳ್ಳಿಯ ಚಿತ್ತಾಕರ್ಷಕ ಆಭರಣಗಳೂ ಇಲ್ಲಿವೆ.

ಶೇ.100 ಕ್ಯಾಶ್​ಬ್ಯಾಕ್​

Jwel 5
Shetty
ದಿನನಿತ್ಯ ಬಳಕೆಯ ಅದರಲ್ಲೂ ಡಾಝ್​ ಶೈಲಿಯ ಚಿನ್ನಾಭರಣಗಳು 15 ಸಾವಿರ ರೂ.ನಿಂದ ಆರಂಭಿಸಿ, ಬ್ರೈಡಲ್​ ಜುವೆಲ್ಲರಿಗಳು 3 ಲಕ್ಷ ರೂ.ನಿಂದ 15 ಲಕ್ಷ ರೂ.ವರೆಗಿನ ದರಗಳಲ್ಲಿ ಲಭ್ಯವಿದೆ. ನವರಾತ್ರಿ ಹಬ್ಬದ ನಿಮಿತ್ತ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನೂ ಘೋಷಿಸಲಾಗಿದೆ. ಆಭರಣಗಳ ಮೇಕಿಂಗ್​ ಚಾರ್ಜಸ್​ನಲ್ಲಿ ಶೇ.100ರ ವರೆಗೆ ಕ್ಯಾಶ್​ಬ್ಯಾಕ್​ ನೀಡುವುದಾಗಿ ಸಂಸ್ಥೆ ತಿಳಿಸಿದೆ.

ಟಿಡಿಎಫ್ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಡಿಂಪಿ, ರೋಶನಿ, ಶ್ವೇತಾ, ಪ್ರೇಮಲತಾ ಎಸ್​. ಹೆಗ್ಡೆ, ಜಯಲಕ್ಷ್ಮೀ ಜೆ. ಹೆಗ್ಡೆ, ಉಷಾಲತಾ ಶೆಟ್ಟಿ, ಕೃಷ್ಣಕುಮಾರಿ ಇತರರು ಉಪಸ್ಥಿತರಿದ್ದರು.

ಎರಡು ರಾಜ್ಯಗಳಲ್ಲಿ ಒಟ್ಟು 8 ಮಳಿಗೆ

Hegde
ಗುಣಮಟ್ಟದ ಆಭರಣಗಳ ಮೂಲಕ ಗ್ರಾಹಕರ ವಿಶ್ವಾಸಾರ್ಹತೆಗೆ ಪಾತ್ರವಾಗಿರುವ ಟಿಡಿಎಫ್​, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದಲ್ಲಿ ಒಟ್ಟು 8 ಮಳಿಗೆಯನ್ನು ಹೊಂದಿದೆ. ಮುಂಬಯಿಯಲ್ಲಿ 5, ಮಂಗಳೂರು ಹಾಗೂ ಉಡುಪಿಯಲ್ಲಿ ತಲಾ 1 ಹಾಗೂ ಮುಂದಿನ ವಾರ ಮುಂಬಯಿಯ ಘಾಟ್​ಕೋಪರ್​ನಲ್ಲಿ ಇನ್ನೊಂದು ಶಾಖೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮಾಲೀಕರು ಹಾಗೂ ಸಹ ಸಂಸ್ಥಾಪಕರಾದ ಪ್ರಸನ್ನ ಶೆಟ್ಟಿ, ಗೌತಮ್​ ಸಿಂಗ್ವಿ ತಿಳಿಸಿದರು.

ಗುಣಮಟ್ಟ ಕಾಯ್ದುಕೊಂಡ ವಿಶ್ವಾಸಿ ಸಂಸ್ಥೆ

TDF Shop
Gurme Ribbon
ಉಡುಪಿಯಲ್ಲಿ ಸಂಸ್ಥೆಯ 7ನೇ ಮಳಿಗೆ ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ, ಟಿಡಿಎಫ್​ ಮಳಿಗೆಯು ಆಭರಣಗಳ ಗುಣಮಟ್ಟ ಕಾಯ್ದುಕೊಂಡ ವಿಶ್ವಾಸಿ ಸಂಸ್ಥೆಯಾಗಿದೆ. ಕರಾವಳಿಯವರು ಶ್ರಮ ಸಂಸ್ಕೃತಿಗೆ ಹೆಸರಾದವರು. ಇದರ ಮಾಲೀಕರೂ ಸಹ ಕರಾವಳಿ ಮೂಲದವರೇ ಆಗಿದ್ದಾರೆ. ಸಂಕಲ್ಪ ಶುದ್ಧಿಯಿದ್ದಲ್ಲಿ ಸಾಧನೆ ಸುಲಭವಾಗುತ್ತದೆ. ಒಂದು ರಾತ್ರಿ-ಹಗಲಲ್ಲಿ ಸಾಧನೆ ಅಸಾಧ್ಯ. ಅದಕ್ಕೆ ನಂಬಿರುವ ದೇವರ ಕೃಪೆ, ನಿರಂತರ ಪರಿಶ್ರಮ ಅಗತ್ಯ. ಟಿಡಿಎಫ್​ ತಂಡ ಆಭರಣ ಕ್ಷೇತ್ರದಲ್ಲಿ ಹೊಸಮೈಲಿಗಲ್ಲು ಸ್ಥಾಪಿಸಲಿ ಎಂದು ಶುಭಹಾರೈಸಿದರು.

ಉಡುಪಿ-ಮಂಗಳೂರಿನಲ್ಲಿ ಕಳೆದ 16 ವರ್ಷದಿಂದ ಟಿಡಿಎಫ್​ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸುತ್ತಿದ್ದೆವು. ಮಂಗಳೂರಿನಲ್ಲಿ ಔಟ್​ಲೆಟ್​ ಹೊಂದಿದ್ದು, ಉಡುಪಿಯಲ್ಲೂ ಮಳಿಗೆ ತೆರೆಯಬೇಕೆಂಬ ಕನಸಿತ್ತು. ಅದು ನವರಾತ್ರಿಯ ಶುಭದಿನದಂದು ಆರಂಭಗೊಂಡಿದೆ. ಗ್ರಾಹಕರಿಗೆ ನಗುಮೊಗದ ಸೇವೆಯೊಂದಿಗೆ ಗುಣಮಟ್ಟದ ಆಭರಣ ಒದಗಿಸಲು ಟಿಡಿಎಫ್​ ಬದ್ಧವಿದೆ. | ವಿರಾಜ ಹೆಗ್ಡೆ, ಸುಧಾ ಶೆಟ್ಟಿ. ಅಸೋಸಿಯೇಟ್​ ಪಾರ್ಟ್ನರ್ಸ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net