

ರಾಯಚೂರು ಧರ್ಮಸ್ಥಳ ಪ್ರಕರಣ ಸುಳ್ಳು ಎಂಬಂದು ಜನರಿಗೂ ಮನವರಿಕೆಯಾಗಿದೆ. ಈ ಘಟನೆ ಹಿಂದಿರುವ ಶಕ್ತಿಗಳ್ಯಾವವು ಎಂಬದನ್ನು ಸರ್ಕಾರ ಬಹಿರಂಗಪಡಿಸಬೇಕೆಂದು ಶಾಸಕ ಡಾ.ಶಿವರಾಜ ಪಾಟೀಲ್ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಅನಾಮಿಕನ ದೂರಿನ ಮೇರೆಗೆ ಎಸ್‌ಐಟಿ ರಚಿಸಿ ತನಿಖೆ ನಡೆಸಿದೆ. ಆದರೆ ಪ್ರಕರಣದ ಹಿಂದಿರುವ ಶಕ್ತಿಯಾವುದು ಎಂಬದು ಬಹಿರಂಗವಾಗಿಲ್ಲ. ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ಹೇಳಿರುವತೆ ಪ್ರಕರಣದ ಹಿಂದೆ ಷಡ್ಯಂತ್ರ ಇರುವದಾಗಿ ಬಹಿರಂಗಪಡಿಸಿದ್ದಾರೆ.
ಅನಾಮಿಕ ವ್ಯಕ್ತಿಯಿಂದ ಹಿಡಿದು ಅನೇಕರು ಕೇವಲ ಪಾತ್ರದಾರಿಗಳು ಎಂಬುದು ಸರ್ಕಾರಕ್ಕೂ ಸ್ಪಷ್ಟವಾಗಿದೆ. ಸರ್ಕಾರ ಪ್ರಕರಣದ ತನಿಖೆಗೆವಹಿಸಿರುವ ಕುರಿತು ಮಾತನಾಡುತ್ತಿದೆ ಹೊರತು ಹಿಂದಿರುವ ವ್ಯಕ್ತಿಯಾರು ಎಂಬದು ಹೇಳುತ್ತಿಲ್ಲ. ಸಚಿವ ಸಂಪುಟದಲ್ಲಿ ಚರ್ಚಿಸಿ ತನಿಖೆಗೆ ನಿರ್ಧರಿಸಲಾಗಿತ್ತಾ, ಇಲ್ಲ ಯಾರೋ ಒಬ್ಬ ವ್ಯಕ್ತಿಯ ಸೂಚನೆ ಮೇರೆಗೆ ನಡೆಯಿತಾ ಎಂಬುದು ಸ್ಪಷ್ಟವಾಗಬೇಕು. ಮುಖ್ಯಮಂತ್ರಿಗಳ ಸುತ್ತಲು ಇರುವ ವ್ಯಕ್ತಿಗಳು ಭಾಗಿಯಾಗಿರುವ ಸಂಶಯಗಳಿವೆ. ಗೊಂದಲಗಳಲ್ಲಿ ಸರ್ಕಾರವಿದೆ. ಎಸ್‌ಐಟಿ ತನಿಖೆ ಹಿಂದಿರುವ ಶಕ್ತಿಗಳ ವಿಚಾರಣೆ ನಡೆಸುತ್ತಾ ಎಂದು ಸ್ಪಷ್ಟಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಜಲ್ದಾರ, ಮುಕ್ತಿಯಾರ ಇದ್ದರು.