ಶ್ರಾವಕರು ದಿನ 108 ಬಾರಿ ಜಪ ಮಾಡಬೇಕು

nrp 4 (1)
Published on

ಎನ್.ಆರ್.ಪುರ: ಶ್ರಾವಕರಾದವರು ಪ್ರತಿನಿತ್ಯ 108 ಬಾರಿ ಜಪ ಮಾಡಬೇಕು ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು. ಬಸ್ತಿಮಠದ ಸಿಂಹನಗದ್ದೆ ಬಸ್ತಿ ಮಠದಲ್ಲಿ ಭಗವಾನ್ ಶ್ರೀ1008 ಶಾಂತನಾಥ ಸ್ವಾಮಿ ಸನ್ನಿಧಿಯಲ್ಲಿ ವಿಧಿವತ್ತಾಗಿ ನಡೆದ ಉಪಾಕರ್ಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಜೈನ ಶ್ರಾವಕರಾದವರು ಶತ್ನತ್ರಯ ಸೂತ್ರವಾದ ಜನಿವಾರವನ್ನು ಜ್ಞಾನ ಸಾಮ್ರಾಜ್ಯ ಯುವರಾಜ ಪದವಿ ಲಭಿಸಲಿ ಎಂಬುದರ ಸಂಕೇತವಾಗಿ ಧರಿಸಲಾಗುತ್ತದೆ. ಪ್ರತಿನಿತ್ಯ ಜಿನ ದರ್ಶನ, ಸಪ್ತ ವ್ಯಸನ, ತ್ಯಾಗ, ಮಕರ ಕ್ರಯಗಳ ತ್ಯಾಗ, ಕಂದ ಮೂಲಗಳ ತ್ಯಾಗ, 108ಬಾರಿ ಜಪ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸಿಕೊಂಡು ಬರಬೇಕು ಎಂದು ಕರೆನೀಡಿದರು. ಉಪಾಕರ್ಮದಲ್ಲಿ ಶ್ರಾವಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net