ಸದಸ್ಯರು ನೀಡಿದ ಅಭಿವೃದ್ಧಿಪರ ಕಾರ್ಯಕ್ರಮ ಕಾರ್ಯರೂಪಕ್ಕೆ

25sunti02
ರಂಗಸಮುದ್ರ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ 86ನೇ ವಾರ್ಷಿಕ ಮಹಾಸಭೆಯಲ್ಲಿ ಪಿ.ಎಸ್.ಬಸಪ್ಪ, ಆರ್.ಕೆ.ಚಂದ್ರ, ಎಂ.ಸಿ.ದಾಮೋದರ, ಎಚ್.ಬಿ.ರುದ್ರಪ್ಪ, ಎ.ಎಂ.ಲೋಕನಾಥ, ಪಿ.ಬಿ.ಆಶೋಕ, ಬಿ.ಎಸ್.ಧನಪಾಲ, ಟಿ.ಸಿ.ಶಿವಕುಮಾರ್, ಜಿ.ಆರ್.ಶಾರದಾ, ಕೆ.ಕೆ.ಲೀಲಾವತಿ, ಡಬ್ಲುೃ.ಪಿ.ಶಿವಕುಮಾರ್ ಭಾಗವಹಿಸಿದ್ದರು.
Published on

ಸುಂಟಿಕೊಪ್ಪ: ರಂಗಸಮುದ್ರ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ 86ನೇ ವಾರ್ಷಿಕ ಮಹಾಸಭೆಯು ದವಸ ಭಂಡಾರ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಪಿ.ಎಸ್.ಬಸಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಕಳೆದ ಅವಧಿಯ ಮಹಾಸಭೆಯ ವರದಿಯನ್ನು ಹಾಗೂ ಸಭೆಯಲ್ಲಿ 2023-24 ರ ಸಾಲಿನ ಜಮಾ-ಖರ್ಚು ಕರಡು ಪ್ರತಿಯನ್ನು ವಾಚಿಸುವ ಮೂಲಕ ಸಭೆಯ ಅಂಗೀಕಾರ ಪಡೆಯಲಾಯಿತು. ಪ್ರಸಕ್ತ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಲಾಯಿತು.

ಪ್ರಸ್ತುತ ಕಾರ್ಯನಿರ್ಸುತ್ತಿರುವ ಆಡಳಿತ ಮಂಡಳಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಕಾರಿ ಮಂಡಳಿಯನ್ನು ಯಥಾವತ್ತಾಗಿ ಮುಂದುವರಿಸಲು ಸದಸ್ಯರಾದ ಬಸಪ್ಪ ಹಾಗೂ ನಂದಿನೆರವಂಡ ಅಚ್ಚಯ್ಯ ಸೇರಿದಂತೆ ಮತ್ತಿತರರು ಸಲಹೆ ನೀಡಿದರು.

ಮಹಾಸಭೆಯಲ್ಲಿ ಸದಸ್ಯರು ಸಲಹೆ ನೀಡಿದ ಅನೇಕ ಅಭಿವೃದ್ಧಿಪರ ಅಂಶಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮವಹಿಸುವುದಾಗಿ ದವಸ ಭಂಡಾರದ ಅಧ್ಯಕ್ಷ ಪಿ.ಎಸ್.ಬಸಪ್ಪ ಭರವಸೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಆರ್.ಕೆ.ಚಂದ್ರ, ನಿರ್ದೇಶಕ ಎಂ.ಸಿ.ದಾಮೋದರ, ಎಚ್.ಬಿ.ರುದ್ರಪ್ಪ, ಎ.ಎಂ.ಲೋಕನಾಥ, ಪಿ.ಬಿ.ಆಶೋಕ, ಬಿ.ಎಸ್.ಧನಪಾಲ, ಟಿ.ಸಿ.ಶಿವಕುಮಾರ್, ಜಿ.ಆರ್.ಶಾರದಾ, ಕೆ.ಕೆ.ಲೀಲಾವತಿ, ಕಾರ್ಯದರ್ಶಿ ಡಬ್ಲುೃ.ಪಿ. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net