ಸದಸ್ಯರ ಅಭಿವೃದ್ಧಿಯೇ ಸಂಘದ ಆದ್ಯತೆ

26BRG1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5007406, 0.59972197);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 43;
Published on

ಬೋರಗಾಂವ: ಪಟ್ಟಣದ ಪಿಕೆಪಿಎಸ್ ಸಂಘದ ವತಿಯಿಂದ ಸದಸ್ಯರ ಅನುಕೂಲಕ್ಕಾಗಿ ವಿವಿಧ ಯೋಜನೆ ಕೈಗೊಂಡಿದ್ದೇವೆ. ಆಧುನಿಕ ಕೃಷಿ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ರೈತ ಹಾಗೂ ಸದಸ್ಯರ ಅಭಿವೃದ್ಧಿಯೇ ನಮ್ಮ ಸಂಘದ ಪ್ರಮುಖ ಆದ್ಯತೆ ಎಂದು ಯುವ ನಾಯಕ ಉತ್ತಮ ಪಾಟೀಲ ಹೇಳಿದರು.

ಪಿಕೆಪಿಎಸ್‌ನ ಸಾಲಗಾರ ಸದಸ್ಯ ರೋಹಿದಾಸ ವಸವಾಡೆ ಇತ್ತೀಚೆಗೆ ಮೃತಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಕೃಷಿ ಸಂಘದ ಕಚೇರಿಯಲ್ಲಿ ಸೋಮವಾರ ಆರೋಗ್ಯ ವಿಮಾ ಯೋಜನೆಯಡಿ ಅವರ ವಾರಸುದಾರ ಪ್ರದೀಪ ವಸವಾಡೆ ಅವರಿಗೆ 1 ಲಕ್ಷ ರೂ. ಚೆಕ್ ಹಸ್ತಾಂತರಿಸಿ ಮಾತನಾಡಿದರು.

ಆರ್.ಟಿ.ಚೌಗುಲಾ ಮಾತನಾಡಿ, ಸಾಲ ಪಡೆದ ಸದಸ್ಯರಿಗೆ ಫಿನ್ಹಾಟ್ ವಿಮಾ ಕಂಪನಿಯಿಂದ ವಿಮೆ ಮಾಡಿಸಲಾಗಿದ್ದು, ಇದು ಮರಣದ ಸಂದರ್ಭದಲ್ಲಿ 1 ಲಕ್ಷ ರೂ. ನೀಡುತ್ತದೆ. ಎಲ್ಲ ಸದಸ್ಯರು ಇದರ ಲಾಭ ಪಡೆಯಬೇಕು ಎಂದರು.

ಉಪಾಧ್ಯಕ್ಷ ಸುಮಿತ್ ರೋಡ್ಡ, ನಿರ್ದೇಶಕ ಪ್ರದೀಪ ಮಾಳಿ, ರಾಜು ಐದಮಾಳೆ, ರಾಜೇಂದ್ರ ಪಾಟೀಲ, ಅಶೋಕ ಮಾಳಿ, ದರ್ಶನ ಪಾಟೀಲ, ಸುರೇಶ ಬಂಕಾಪುರೆ, ರಾಜು ಗಜರೆ, ರಾವಸಾಹೇಬ ಚೌಗುಲೆ, ರಾಕೇಶ ಫಿರಗಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net