

ಕೊರಟಗೆರೆ: ಕೊರಟಗೆರೆ ಪಟ್ಟಣದ ಅಭಿವೃದ್ಧಿ ಕೆಲಸಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗೃಹಸಚಿವರ ಆದೇಶ ಪಾಲನೆ ಮಾಡುತ್ತಿಲ್ಲ ಮತ್ತು ಪಟ್ಟಣದ ಅಭಿವೃದ್ಧಿ ಕುಂಠಿತಕ್ಕೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಮಂಗಳವಾರ ಆಯೋಜಿಸಿದ್ದ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೂಶ ವ್ಯಕ್ತಪಡಿಸಿದರು.
ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಬೇಕಾಗಿದ್ದ ಸಭೆ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಯಿತು. ಸಭೆಯ ಆರಂಭದಲ್ಲೇ ಪಪಂ ಸದಸ್ಯ ನಟರಾಜು ಮಾತನಾಡಿ, ಹಿಂದಿನ ಸಭೆಯನ್ನು ನಾಮಕೆವಸ್ಥೆಗೆ ನಡೆಸಿ ನಂತರ ನಿಮಗೆ ಇಷ್ಟ ಬಂದಂತೆ ಆಕ್ಷನ್ ಪ್ಲಾನ್ ಅನ್ನು ಬದಲಾಯಿಸಿದ್ದೀರಿ, ಇದು ಹಲವು ಸದಸ್ಯರ ಗಮನಕ್ಕೆ ಬಂದಿಲ್ಲ. ಪಟ್ಟಣದಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳ ಬಗ್ಗೆ ರ್ನಿಲಕ್ಷ ತೋರಿಸುತ್ತಿದ್ದೀರಿ ಎಂದು ಮುಖ್ಯಾಧಿಕಾರಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ನಂದೀಶ್ ಮಾತನಾಡಿ, ಡಿಸಿ ಭೇಟಿ ನೀಡಿ ಭರವಸೆ ನೀಡಿ ಒಂದುವರೆ ವರ್ಷವಾಯಿತು. ಇಲ್ಲಿಯವೆರೆಗೂ ಯಾವುದೇ ಸಣ್ಣ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಜಿಲ್ಲಾಧಿಕಾರಿಗಳಿಗೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಬದ್ಧತೆ ಇಲ್ಲ. ಈ ಎಲ್ಲ ಕಾಮಗಾರಿಗಳ ಕುಂಠಿತಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು.
ಪಂಚಾಯಿತಿ 9.80 ಲಕ್ಷ ರೂಪಾಯಿಗಳಲ್ಲಿ ರೂಪಿಸಲಾಗಿದ್ದ ಸೋಲಾರ್ ರೂಫ್ ಟಾಪ್ ಕಾಮಗಾರಿ ಜಿಲ್ಲಾಡಳಿತಕ್ಕೆ ಅನುಕೂಲವಾಗುವ ಕಾಮಗಾರಿ. ಅದನ್ನು ಕೂಡಲೇ ಬದಲಾಯಿಸಿ ಬೇರೆ ಕಾಮಗಾರಿಗಳಿಗೆ ಹಾಕಬೇಕು. ಕೊರಟಗೆರೆ ಪಟ್ಟಣದ ಮಧುಗಿರಿ&ತುಮಕೂರು ರಸ್ತೆ ಪ್ರಾರಂಭದಲ್ಲಿ ನೂತನ ನಾಮಫಲಕ ನಿರ್ಮಿಸುವಂತೆ ಸದಸ್ಯರು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಮೇಲೆ ನಿಲ್ಲದ ಆಕ್ಷೇಪ: ಡಿಸಿ ಶುಭಕಲ್ಯಾಣ್ ಮೇಲೆ ಪಪಂನಲ್ಲಿ ನಡೆಯುವ ಪ್ರತಿ ಸಭೆಯಲ್ಲೂ ಅವರ ಕಾರ್ಯವೈಖರಿ ಬಗ್ಗೆ ಮತ್ತು ಅಭಿವೃದ್ಧಿ ರ್ನಿಲಕ್ಷ$್ಯದ ಬಗ್ಗೆ ಪಪಂ ಸದಸ್ಯರು ಆಕ್ಷೇಪ ಮತ್ತು ಬೇಸರವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಕಳೆದ ಬಾರಿಯ ಎರಡನೇ ಸಭೆಯಲ್ಲಿ ಕೆಲವು ಸದಸ್ಯರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭಿವೃದ್ಧಿ ಹಣ ಬಿಡುಗಡೆಗೆ ಕಮಿಷನ್ ನೀಡಬೇಕಾ ಎನ್ನವ ಅನುಮಾನ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿ ಸಚಿವರನ್ನು ಮೆಚ್ಚಿಸಲು ತೋರ್ಪಡಿಕೆಗೆ ಅಭಿವೃದ್ಧಿ ಸ್ಥಳಗಳಿಗೆ ಭೇಟಿ ನೀಡಿ ಮತ್ತೆ ವರ್ಷಗಳಾದರೂ ಸಹ ಬರುವುದಿಲ್ಲ. ಆ ಕೆಲಸ ಹಾಗೆ ನನೆಗುದಿಗೆ ಬಿದ್ದಿವೆ ಎಂದು ಸದಸ್ಯರು ಆರೋಪಿಸಿದರು.
ಪಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಉಷ್ಮಾಫಾರಿಯಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ, ಮುಖ್ಯಾಧಿಕಾರಿ ಉಮೇಶ್, ಸದಸ್ಯರಾದ ಕೆ.ಆರ್.ಓಬಳರಾಜು, ಕೆ.ಎನ್.ಲಕ್ಷಿ$್ಮನಾರಾಯಣ್, ನಟರಾಜು, ಪುಟ್ಟನರಸಯ್ಯ, ಭಾರತಿ ಸಿದ್ದಮಲ್ಲಯ್ಯ, ಪ್ರದಿಪ್ ಕುಮಾರ್, ನಂದೀಶ್, ನಾಗರಾಜು, ನಾಮಿನಿ ಸದಸ್ಯರಾದ ಮಂಜುಳಾ, ಎಂ,ಜಿ.ಸುಧೀರ್, ಫಯಾಜ್ ಅಹಮದ್ ಸೇರಿದಂತೆ ಅಧಿಕಾರಿ ಇದ್ದರು.