ರೈತರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ

6 lxr 2- Lamani moter
Published on

ಲಕ್ಷ್ಮೇಶ್ವರ: ರೈತ ದೇಶದ ಬೆನ್ನಲುಬಾಗಿದ್ದು, ರೈತರ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಾಗಿದೆ. ಇದನ್ನು ಅರಿತುಕೊಂಡ ಸರ್ಕಾರಗಳು ರೈತರಿಗೆ ವಿವಿಧ ಯೋಜನೆಗಳಡಿ ಕೃಷಿ ಪೂರಕ ಸವಲತ್ತು ಕಲ್ಪಿಸುತ್ತಿವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.


ಶನಿವಾರ ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆರ್ಥಿಕವಾಗಿ ಹಿಂದುಳಿದ ರೈತ ಫಲಾನುಭವಿಗಳಿಗೆ ಮೋಟಾರ್ ಪಂಪ್​ಸೆಟ್ ವಿತರಣೆ ಮಾಡಿ ಮಾತನಾಡಿದರು.


ಬಡ ಮತ್ತು ಸಣ್ಣ ರೈತರ ಕಲ್ಯಾಣಕ್ಕಾಗಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್​ವೆಲ್ ಕೊರೆಸಿದ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮೋಟಾರ್, ಪಂಪ್​ಸೆಟ್ ವಿತರಿಸಲಾಗುತ್ತಿದೆ. 3 ಲಕ್ಷ ರೂ. ಮೌಲ್ಯದ ಸೌಲಭ್ಯ ಪಡೆಯುವ ರೈತರು ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದು ಆರ್ಥಿಕ ಪ್ರಗತಿ ಹೊಂದಬೇಕು ಎಂದು ಸಲಹೆ ನೀಡಿದರು.


ಈ ವೇಳೆ ಸೌಲಭ್ಯ ಪಡೆದ ರೈತರಾದ ಎಚ್.ಎಂ. ಪಾಟೀಲ, ಬಸವಣ್ಣೆಪ್ಪ ಹೊಸಮನಿ, ಬಿ.ಕೆ. ನಿಡಗುಂದಿ, ಎಂ.ಎಂ. ರಾಟಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ರುದ್ರಪ್ಪ ಉಮಚಗಿ, ರಮೇಶ ಹಾಳದೋಟದ, ಹಾಲಪ್ಪ ಸೂರಣಗಿ, ಶೇಖಪ್ಪ ಕುರ್ತಕೋಟಿ, ರವಿ ಲಮಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net