ಪರಸ್ಪರ ರಕ್ಷಣೆಯ ಸಂಕಲ್ಪ ರಾ ಬಂಧನ

FotoJet (1)
Published on

ಹುಳಿಯಾರು: ರಕ್ಷಾ ಬಂಧನ ಕೇವಲ ಒಂದು ದಾರ ಕಟ್ಟುವ ಹಬ್ಬವಲ್ಲ. ಸಹೋದರ -ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಮತ್ತು ಪರಸ್ಪರ ರಕ್ಷಣೆಯ ಸಂಕಲ್ಪದ ಪ್ರತಿಕ ಎಂದು ಬಿ.ಕೆ.ಗೀತಕ್ಕ ತಿಳಿಸಿದರು. ಹುಳಿಯಾರಿನ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿ, ರಕ್ಷಾ ಬಂಧನದ ಮೂಲ ಉದ್ದೇಶ ಪರಮಾತ್ಮನ ಶ್ರೀರಕ್ಷೆಯು ಸದಾ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ. ಈ ದಿನ ಸಮಾಜದ ಶಾಂತಿ ಮತ್ತು ಸೌಹಾರ್ದತೆಗಾಗಿ ಒಗ್ಗಟ್ಟಿನಿಂದ ದುಡಿಯುವ ಸಂಕಲ್ಪ ಮಾಡಬೇಕು. ನಮ್ಮ ಕೈಲಾದಷ್ಟು ಇತರರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.ಔಷಧಗಳಿಂದಲೇ ಸಂಪೂರ್ಣ ಆರೋಗ್ಯ ದೊರೆಯುವುದಿಲ್ಲ, ಮನಸ್ಸಿನ ಶಾಂತಿಯು ಮುಖ್ಯ. ಧ್ಯಾನ, ಯೋಗಗಳು ಮನಸ್ಸನ್ನು ಆರೋಗ್ಯ ಮತ್ತು ಶಾಂತವಾಗಿ ಇರಿಸುತ್ತದೆ. ಇದರಿಂದಾಗಿ ದೇಹ ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತದೆ ಎಂದರು.ಹಬ್ಬದ ಪ್ರಯುಕ್ತ ಪಪಂ, ಎಸ್​ಬಿಐ ಬ್ಯಾಂಕ್​, ಶಿರಾ ಟೌನ್​ ಕೋ ಆಪರೇಟಿವ್​ ಬ್ಯಾಂಕ್​, ಕೆನರಾ ಬ್ಯಾಂಕ್​, ಮೈಸೂರು ಬ್ಯಾಂಕ್​ ಹಾಗೂ ಧರ್ಮಸ್ಥಳ ಮಂಜುನಾಥ ಕಚೇರಿ ಸೇರಿದಂತೆ ಹಲವೆಡೆಗೆ ತೆರಳಿ ಎಲ್ಲರಿಗೂ ರಾಖಿ ಕಟ್ಟಿ, ಸಿಹಿ ಹಂಚಿ ಶುಭ ಕೋರಲಾಯಿತು.

ಚಂದನ ಅಕ್ಕ, ಲಲಿತಮ್ಮ, ದುರ್ಗರಾಜು, ತಿಮ್ಮಯ್ಯ, ರಾಜಣ್ಣ, ನಿಜಲಿಂಗಪ್ಪ, ಸುಧಕ್ಕ ಮತ್ತು ರಾಮಚಂದ್ರಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net