

ನೆಲಮಂಗಲ: ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಪರಿಸರ ಉಳಿಸುವುದು ಮತ್ತು ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರನ ಕರ್ತವ್ಯ ಎಂದು ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಚ್.ವಿ.ವೀರಭದ್ರಸ್ವಾಮಿ ತಿಳಿಸಿದರು.
ನಗರದ ಸೊಂಡೆಕೊಪ್ಪ ರಸ್ತೆಯ ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಪರಿಸರ ರಕ್ಷಣಾ ದಿನದಲ್ಲಿ ಮಾತನಾಡಿದರು.
ಈ ಮೊದಲು ಗ್ರಾಮೀಣ ಜನರು ಪ್ರಕೃತಿಯನ್ನು ದೇವರಂತೆ ಪೂಜಿಸುತ್ತಿದ್ದರು. ನಿತ್ಯ ಜೀವನ ನೈಸರ್ಗಿಕ ಸಂಪನ್ಮೂಲದ ಮೇಲೆ ಅವಲಂಬಿಸಿದೆ. ಪಕೃತಿ ಮನುಷ್ಯನಿಗೆ ಅಪಾರವಾದ ನೈಸರ್ಗಿಕ ಸಂಪನ್ಮೂಲ ನೀಡಿದ್ದು, ಆದರೆ ಮನಷ್ಯ ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ ಎಂದು ಬೇಸರಿಸಿದರು.
ಪರಿಸರ ಮಾಲಿನ್ಯ ತಡೆಗಟ್ಟುವ ಜವಾಬ್ದಾರಿ ಸರ್ಕಾರಕ್ಕೆ ಮಾತ್ರವಿಲ್ಲ. ಪ್ರತಿ ನಾಕರಿಕನ ಮೇಲಿದೆ. ಪಕ್ಷಾತೀತವಾಗಿ ಪರಿಸರವನ್ನು ಸಂರಕ್ಷಣೆ ಮಾಡಿದ್ದಾಗ ಮಾತ್ರ ಮಂದಿನ ಪೀಳಿಗೆ ಜನರಿಗೆ ಉತ್ತಮ ಪರಿಸರ ಉಳಿಸಲು ಸಾಧ್ಯ ಎಂದರು.
ಎನ್‌ಸಿಸಿ ಅಧಿಕಾರಿ ಕೆ.ಎನ್.ಅಮರೇಂದ್ರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೃಷಿಭೂವಿಗಳು ಕೈಗಾರಿಕೆ, ಬಡಾವಣೆಗಳಾಗಿ ನಿರ್ಮಾಣ ಮಾಡಿದ್ದು, ಗ್ರಾಮೀಣ ಭಾಗದಲ್ಲಿಲ್ಲೂ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ರಾ.ಹೆದ್ದಾರಿ ಸೇರಿ ನಗರ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಸಾವಿರಾರು ಮರ ಕಡಿದಿದ್ದಾರೆ. ಒಂದು ಗಿಡ ಸುಮಾರು 400 ಜನಕ್ಕೆ ಆಮ್ಲಜನಕ ನೀಡುವ ಶಕ್ತಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡನೆಡಬೇಕು ಎಂದರು.
ವಿಶ್ವಾದಾದ್ಯಂತ ಪರಿಸರ ಮಾಲಿನ್ಯವಾಗಿದ್ದು, ಕರೊನಾ ಮಹಾಮಾರಿ ಜಗತ್ತು ತಲ್ಲಣಗೊಳಿಸಿದೆ. ಪ್ರತಿಯೊಬ್ಬರೂ ಪರಿಸರದ ಮೇಲೆ ಕಾಳಜಿ ತೋರಿಸಿದ್ದಾಗ ಮಾತ್ರ ಸ್ವಸ್ಥ ಪರಿಸರ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಉಪನ್ಯಾಸಕರಾದಶ್ರೀಧರ್‌ಮೂರ್ತಿ, ಎಲ್.ಚನ್ನಪ್ಪ, ರಮೇಶ್‌ಬಾಬು, ಮನುಕುಮಾರ್, ಪ್ರಕಾಶ್, ಮತ್ತಿತರರು ಉಪಸ್ಥಿತರಿದ್ದರು.