ಕಾಡಾನೆಗಳ ದಾಳಿಯಿಂದ ಭತ್ತದ ಬೆಳೆ ನಾಶ

IMG-20200526-WA0014 (1)
Published on

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿ ಬ್ಯಾದನೆ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದಾಗಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನಾಶವಾಗಿದೆ.

ತಾಲೂಕಿನ ಅರೇಹಳ್ಳಿ ಭಾಗದ ವಿವಿಧ ಗ್ರಾಮಗಳ ಕಾಫಿ ಹಾಗೂ ಭತ್ತದ ಗದ್ದೆಗಳಿಗೆ ದಾಳಿ ಇಟ್ಟಿರುವ ಕಾಡಾನೆಗಳು, ಬ್ಯಾದನೆ ಗ್ರಾಮದ ದ್ಯಾವಪ್ಪಗೌಡ ಎಂಬುವರ ಭತ್ತದ ಗದ್ದೆಗೆ ದಾಳಿ ನಡೆಸಿ ಕಟಾವಿಗೆ ಬಂದಿದ್ದ ಬೆಳೆ ನಾಶಪಡಿಸಿವೆ.

ಮೆಣಸಿನ ಗಿಡ ಸೇರಿ ಕಾಫಿ ತೋಟಗಳಿಗೂ ನುಗ್ಗಿ ತಿಂದು ತುಳಿದು ನಾಶಪಡಿಸಿವೆ. ರೈತರಿಗೆ ಸಾಕಷ್ಟು ನಷ್ಟ ಸಂಭವಿಸಿದ್ದು, ರೈತರಿಗಾದ ನಷ್ಟವನ್ನು ಅರಣ್ಯ ಇಲಾಖೆ ಭರಿಸಿ ಕೊಡಬೇಕೆಂಬುದು ಈ ಭಾಗದ ಗ್ರಾಮಸ್ಥರ ಆಗ್ರಹವಾಗಿದೆ.

ಬಿರಡಳ್ಳಿ ಗ್ರಾಪಂ ವ್ಯಾಪ್ತಿಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮದನ್ ಕುಮಾರ್, ತಿಂಗಳಿಂದ ಈ ಭಾಗಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಕತ್ತಲಾಗುತ್ತಿದ್ದಂತೆ ಎಲ್ಲೆಂದರಲ್ಲಿ ದಾಳಿ ನಡೆಸಿ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಒತ್ತಾಯಿಸಿದ್ದಾರೆ. ಗ್ರಾಮಸ್ಥರಾದ ದೀಕ್ಷಿತ್, ಕೃಷ್ಣ, ಯೋಗೇಶ್, ಚಿರಂತ್ ಹಾಗೂ ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net