

ಕೋಟ: ರಂಗಾಭ್ಯಾಸದ ಮೂಲಕ ವಾನವೀಯತೆ ಗುಣಗಳನ್ನು ಕಲಿತು ಸವಾಜಕ್ಕೆ ವಾದರಿಯಾಗಿರುವುದು ಒಳ್ಳೆಯ ಸಂಸ್ಕಾರ. ರಂಗಭೂಮಿಯಲ್ಲಿ ಬದ್ಧತೆ, ಶಿಸ್ತು ಅತೀ ಅಗತ್ಯ. ಪ್ರಸಿದ್ಧಿಯ ಕಡೆಗೆ ಒಲವು ಒಳಿತಲ್ಲ. ಪ್ರಸಿದ್ಧಿಯಿಂದ ಬೆಳವಣಿಗೆ ಕುಂಠಿತವಾಗುತ್ತದೆ. ನಿರಂತರ ರಂಗಕಲೆಯಲ್ಲಿ ತೊಡಗಿಕೊಂಡರೆ ತಾನಾಗಿ ಪ್ರಸಿದ್ಧಿ ಬಂದೇ ಬರುತ್ತದೆ ಎಂದು ರಂಗ ನಿರ್ದೇಶಕ ಪ್ರಶಾಂತ್ ಶೆಟ್ಟಿ ಕೋಟ ಹೇಳಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಧಮನಿ ತೆಕ್ಕಟ್ಟೆ ನೇತೃತ್ವದಲ್ಲಿ ಚಿಗುರು ವೃತ್ತಿಪರ ರಂಗ ತರಬೇತಿ ಮಕ್ಕಳಿಗಾಗಿ ಹದಿನೈದು ದಿನಗಳ ಕಾರ್ಯಾಗಾರವನ್ನು ಇತ್ತೀಚಿಗೆ ಉದ್ಘಾಟಿಸಿ ಮಾತನಾಡಿದರು.
ಕೈಲಾಸ ಕಲಾಕ್ಷೇತ್ರ ಅಧ್ಯಕ್ಷ ಹೆರಿಯ ವಾಸ್ಟರ್ ಮಾತನಾಡಿ, ರಂಗ ಭೂಮಿಯ ಮೂಲಕ ಹೊಸ ಪ್ರಪಂಚಕ್ಕೆ ಹೊಸತನ, ಹೊಸ ಮೌಢ್ಯಗಳಿಂದ ಹೊಸ ಭಾಷ್ಯ ಬರೆದು ನಾವೀನ್ಯತೆಯನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ಮಾತನಾಡಿದರು. ಶ್ರೀಶ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರ್ಷಿತಾ ಅಮೀನ್ ನಿರೂಪಿಸಿದರು.