

ಹನೂರು: ತಾಲೂಕಿನ ಲೊಕ್ಕನಹಳ್ಳಿ ಬಳಿಯ ಆಂಡಿಪಾಳ್ಯ ಗ್ರಾಮದ ಸುತ್ತಮುತ್ತಲಿನ ಜನರ ಆತಂಕಕ್ಕೆ ಕಾರಣವಾಗಿರುವ ಚಿರತೆ ಸೆರೆಗೆ ಮಂಗಳವಾರ ಅರಣ್ಯ ಇಲಾಖೆ ಬೋನು ಇರಿಸಿದೆ.
ವಾರದ ಹಿಂದೆ ಆಂಡಿಪಾಳ್ಯ ಗ್ರಾಮದ ಕುಮಾರ್ ಎಂಬುವರಿಗೆ ಸೇರಿದ ಮೇಕೆಯನ್ನು ಚಿರತೆ ದಾಳಿ ನಡೆಸಿ ಬಲಿ ತೆಗೆದುಕೊಂಡಿತ್ತು. ಅಲ್ಲದೆ ಗ್ರಾಮದ ಸುತ್ತಮುತ್ತ ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ರೈತರು ಹಾಗೂ ಜನರು ಭಯಭೀತರಾಗಿದ್ದು, ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಸಂತೋಷ್‌ಕುಮಾರ್ ಹಾಗೂ ಆರ್‌ಎಫ್‌ಒ ಶಿವರಾಮು ಮಾರ್ಗದರ್ಶನದಲ್ಲಿ ಗ್ರಾಮ ಸಮೀಪದಲ್ಲಿ ಬೋನು ಇರಿಸಲಾಗಿದ್ದು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಡಿಆರ್‌ಎಫ್‌ಒ ಕೃಷ್ಣಪ್ಪ, ಸಿಬ್ಬಂದಿ ಚಂದ್ರು, ವಿಠಲ್ ಇತರರು ಇದ್ದರು.