ಸಾರಿಗೆ ಇಲಾಖೆಯ ಆನ್​ಲೈನ್​ ಸೇವೆಗೆ ಅಪಸ್ವರ

Online
Published on

ಬೆಂಗಳೂರು: ಕಲಿಕಾ ಚಾಲನಾ ಪರವಾನಗಿ (ಎಲ್​ಎಲ್​), ವಾಹನ ನೋಂದಣಿ, ಆರ್​ಸಿ ಕಾರ್ಡ್​ ನವೀಕರಣ ಸೇರಿ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್​ಟಿಒ) 20ಕ್ಕೂ ಅಧಿಕ ಸೇವೆಗಳು ನ.1ರಿಂದ ಆನ್​ಲೈನ್​ನಲ್ಲೇ ಸಿಗಲಿವೆ. ಆದರೆ, ೇಸ್​ಲೆಸ್​ ಆಧಾರದಲ್ಲಿ ಜಾರಿಯಾಗುತ್ತಿರುವ ಡಿಜಿಟಲೀಕರಣಕ್ಕೆ ತಕ್ಕಂತೆ ವ್ಯವಸ್ಥೆ ಮೇಲ್ದರ್ಜೆಗೇರಿಸದಿರುವ ಸಾರಿಗೆ ಇಲಾಖೆ ಕ್ರಮಕ್ಕೆ ಅಧಿಕಾರಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಆನ್​ಲೈನ್​ ಸೇವೆಯ ಹೆಸರಲ್ಲಿ ಸಾರ್ವಜನಿಕ ಸೇವೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಈವರೆಗೆ ಮೋಟಾರು ವಾಹನ ನಿಯಮ 33ರ ಪ್ರಕಾರ ಹೊಸ ವಾಹನ ಖರೀದಿಸಿದಾಗ ರಿಜಿಸ್ಟ್ರೆಷನ್​ ಜವಾಬ್ದಾರಿ ಆಯಾ ಆರ್​ಟಿಒಗಳಿಗೆ ಇತ್ತು. ಆದರೀಗ ಕಾಯ್ದೆ ತಿದ್ದುಪಡಿ ಮಾಡಿ ವಾಹನ ರಿಜಿಸ್ಟ್ರೆಷನ್​ ಶೋರೂಂನಲ್ಲೇ ನಡೆಯಲಿದ್ದು, ಡೀಲರ್​ಗಳಿಗೆ ಜವಾಬ್ದಾರಿ ಕೊಡಲಾಗಿದೆ.

ಸಮರ್ಪಕ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲಿ ಅರ್ಜಿಗಳು ಸಲ್ಲಿಕೆಯಾದರೂ ಸಹ ಆರ್​ಟಿಒ ಮಟ್ಟದಲ್ಲಿ ತಿರಸತಗೊಳ್ಳುವ ಸಂಖ್ಯೆ ಹೆಚ್ಚುತ್ತದೆ. ನೇರ ಭೇಟಿ ಸಂದರ್ಭದಲ್ಲೇ ಸರಿಯಾದ ದಾಖಲಾತಿ ಸಲ್ಲಿಸದ ಕಾರಣಕ್ಕೆ ಹಲವು ಅರ್ಜಿಗಳು ತಿರಸತಗೊಳ್ಳುತ್ತಿದ್ದವು.

ನಾಳೆ ಸಿಎಂ ಚಾಲನೆ

ನ.1 ಸೋಮವಾರ ಯಶವಂತಪುರದಲ್ಲಿ ರುವ ಶೋರೂಂನಲ್ಲಿ ಹೊಸ ಆನ್​ಲೈನ್​ ಸೇವೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ಅನುಕೂಲವೇನು?

  • ಆರ್​ಟಿಒ ಕಚೇರಿಗಳಿಗೆ ಅಲೆಯಬೇಕಿಲ್ಲ. ಮನೆಯಲ್ಲಿ ಕುಳಿತೇ ಸೇವೆ
  • ಜನರಿಗೆ ನೇರ ಸೇವೆ. ಬ್ರೋಕರ್​, ಏಜೆಂಟ್​ಗಳ ಹಾವಳಿ ತಪ್ಪುತ್ತದೆ
  • ಆರ್​ಟಿಒ ಕಚೇರಿಗಳಲ್ಲಿ ಕೇಳಿಬರುವ ಭ್ರಷ್ಟಾಚಾರ ಆರೋಪಕ್ಕೆ ಬ್ರೇಕ್​
  • ಕರೊನಾ ಸಮಯದಲ್ಲಿ ಆನ್​ಲೈನ್​ ಸೇವೆ ಸಾರ್ವಜನಿಕರಿಗೆ ಉಪಯುಕ್ತ ಅನನುಕೂಲವೇನು?
  • ಆನ್​ಲೈನ್​ ಸೇವೆಗೆ ತಕ್ಕಂತೆ ವ್ಯವಸ್ಥೆಯನ್ನು ಅಪ್​ಗ್ರೇಡ್​ ಮಾಡಿಲ್ಲ
  • ಹಳೇ ಕಂಪ್ಯೂಟರ್​ಗಳು, ನೆಟ್​ವರ್ಕ್​ ಸಮಸ್ಯೆ, ಸಿಬ್ಬಂದಿ ಕೊರತೆ
  • ಗ್ರಾಮೀಣ ಭಾಗದ ಬಹುತೇಕ ಜನರಿಗೆ ಆನ್​ಲೈನ್​ ಸೇವೆ ಅರಿವಿಲ್ಲ
  • 3ನೇ ವ್ಯಕ್ತಿ ಮೂಲಕ ಸೇವೆ ಪಡೆಯಬೇಕಾದ್ದರಿಂದ ವಂಚನೆ ಸಾಧ್ಯತೆ
  • ಸರಿಯಾದ ದಾಖಲೆ ಸಲ್ಲಿಸದೆ ಅರ್ಜಿಗಳು ತಿರಸತಗೊಳುವ ಸಾಧ್ಯತೆ
  • ಸಾರ್ವಜನಿಕ ಸೇವೆಗಳು ಖಾಸಗೀಕರಣಗೊಳ್ಳುತ್ತಿರುವ ಆತಂಕ

ಈ ಸೇವೆ ಕುಳಿತಲ್ಲೇ ಸಿಗುತ್ತೆ

  • ಪರವಾನಗಿ ರದ್ಧತಿ/ಶರಣಾಗತಿ
  • ಆರ್​ಸಿ ನಕಲು ಪ್ರತಿ
  • ಗೂಡ್ಸ್​ ವಾಹನ ಪರವಾನಗಿ
  • ಆಟೋ ರಿಾ ಪರ್ಮಿಟ್​ ನವೀಕರಣ
  • ಆರ್​ಸಿಯಲ್ಲಿ ವಿಳಾಸ ಬದಲಾವಣೆ
  • ಲಕ್ಸುರಿ ಟ್ಯಾಕ್ಸಿಗೆ ಪರವಾನಗಿ
  • ನ್ಯಾಷನಲ್​ ಪರ್ಮಿಟ್​ಗೆ ಅನುಮತಿ
  • ಗೂಡ್ಸ್​ ವಾಹನ ಪರ್ಮಿಟ್​ ನಕಲು ಪ್ರತಿ
  • ಆಟೋ ಪರ್ಮಿಟ್​ ನಕಲು ಪ್ರತಿ
  • ಗೂಡ್ಸ್​ ವಾಹನ ಪರವಾನಗಿ ನವೀಕರಣ
  • ಲಕ್ಸುರಿ ವಾಹನ ಪರ್ಮಿಟ್​ ನವೀಕರಣ
  • ಕಂಡಕ್ಟರ್ಸ್​ ಲೈಸೆನ್ಸ್​ ನವೀಕರಣ
  • ಡಿಎಲ್​ ಮಾಹಿತಿ
  • ಕಂಡಕ್ಟರ್​ ಲೈಸೆನ್ಸ್​
  • ಎಲ್​ಎಲ್​ನಲ್ಲಿ ಹೆಸರು/ವಿಳಾಸ ಬದಲಾವಣೆ
  • ಎಲ್​ಎಲ್​ ನಕಲು ಪ್ರತಿ

ಆರ್​ಟಿಒಗೆ ಇರುವ ಅಧಿಕಾರವೇನು?

  • ವಾಹನ ಮಾಲೀಕತ್ವ ವಗಾವಣೆ
  • ವಾಹನಕ್ಕೆ ಎನ್​ಒಸಿ ವಿತರಣೆ
  • ವಾಹನ ಹೈಪೊಥಿಕೇಷನ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net