

ತ್ಯಾಮಗೊಂಡ್ಲು: ಬಮುಲ್‌ನಿಂದ ದೇಶೀಯ ತಳಿ ಹಾಲಿಗೆ ಉತ್ತಮ ಬೇಡಿಕೆಯಿದ್ದು, ತಾಲೂಕಿನಲ್ಲಿ ಎಂಟು ಡೇರಿ ಹಾಲು ಉತ್ಪಾದಕರಿಗೆ ದೇಶೀಯ ಸಾಹಿವಲ್ ತಳಿ ಗೋವು ವಿತರಿಸಲಾಗುತ್ತಿದೆ ಎಂದು ಬಮುಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ತಿಳಿಸಿದರು.
ಹೋಬಳಿಯ ಇಸುವನಹಳ್ಳಿಯಲ್ಲಿ ಬಮುಲ್‌ನಿಂದ ನಿರ್ಮಾಣವಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ದೇಶೀಯ ತಳಿ ಹಾಲಿಗೆ ಮಾರುಕಟ್ಟೆಯಲ್ಲಿ 80 ರೂಪಾಯಿ ತುಪ್ಪಕ್ಕೆ ಸುಮಾರು 2000 ರೂ.ವೆರೆಗೂ ಬೇಡಿಕೆಯಿದೆ. ಬಮುಲ್ ಸಹ ರೈತರಿಗೆ ಸಬ್ಸಿಡಿ ದರದಲ್ಲಿ ದೇಸಿಗೋವು ನೀಡಿ ರೈತರಿಂದ ನೇರವಾಗಿ ಹಾಲನ್ನು ಸಂಗ್ರಹಿಸಿ ಲೀಟರಿಗೆ 52 ರೂಪಾಯಿ ನೀಡುತ್ತಿದೆ. ಆದ್ದರಿಂದ ರೈತರು ಹೆಚ್ಚಾಗಿ ದೇಶೀಯ ತಳಿಯ ಗೋವು ಸಾಗಣೆಗೆ ಮುಂದಾಗಬೇಕು ಎಂದರು.
ಹಿಂದೆ ನೀರಿನ ಮೂಲಕ್ಕೆ ಕೊರತೆ ಇರಲಿಲ್ಲ, ಈಗ ನೀರಿನ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಶುದ್ಧ ನೀರು ದೊರೆಯದೆ ಜನರು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ, ಆದ್ದರಿಂದ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದೇವೆ, ಒಂದು ವರ್ಷದ ಕಾಲ ಬಮುಲ್ ಘಟಕದ ನಿರ್ವಹಣೆ ಮಾಡುತ್ತದೆ, ನಂತರ ಒಂದು ಕ್ಯಾನಿಗೆ ಬರುವ ಐದು ರೂಪಾಯಿಯನ್ನು ಸಂಗ್ರಹಿಸಿ ಎಂಪಿಸಿಎಸ್ ಸಂಘದ ಮೂಲಕವೇ ಉತ್ತಮ ನಿರ್ವಹಣೆ ಮಾಡಲಾಗುವುದು ಎಂದರು.
ದೊಡ್ಡಬೆಲೆ ಗ್ರಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್, ಬಮುಲ್ ಉಪ ವ್ಯವಸ್ಥಾಪಕ ಕೆ.ಗೋಪಾಲಗೌಡ, ವಿಸ್ತರಣಾಧಿಕಾರಿಗಳಾದ ಜಿ.ಮರಿಗೌಡ, ಎಂ.ಶ್ರುತಿ, ಬಮುಲ್ ಕಲ್ಯಾಣ ಟ್ರಸ್ಟ್ ಸದಸ್ಯ ಎಸ್.ರಮೇಶ್‌ಬಾಬು, ಕಳಲುಘಟ್ಟ ವಿಎಸ್‌ಎಸ್‌ಎನ್ ಅಧ್ಯಕ್ಷ ಭೋಜರಾಜು, ಇಸುವನಹಳ್ಳಿ ಡೇರಿ ಸಿಇಒ ಕೆ.ರುದ್ರಪ್ರಸಾದ್, ಡೇರಿ ಅಧ್ಯಕ್ಷ ಎಸ್.ಶಿವರುದ್ರಯ್ಯ, ಉಪಾಧ್ಯಕ್ಷೆ ಲಲಿತಾ ಕೆ.ಎಸ್., ನಿದೇರ್ಶಕರಾದ ಇಸುವನಹಳ್ಳಿ ಜಗದೀಶ್, ಇಸುವನಹಳ್ಳಿ ಕೃಷ್ಣಮೂರ್ತಿ, ಇಸುವನಹಳ್ಳಿ ಮಲ್ಲಿಕಾರ್ಜುನಯ್ಯ, ಇಸುವನಹಳ್ಳಿ ಪಾಲನೇತ್ರ, ಇಸುವನಹಳ್ಳಿ ವಿರೂಪಾಕ್ಷಯ್ಯ, ಇಸುವನಹಳ್ಳಿ ಉಮಾದೇವಿ, ಇಸುವನಹಳ್ಳಿ ಬೈಲಮ್ಮ, ಇಸುವನಹಳ್ಳಿ ಶಿವರುದ್ರಯ್ಯ, ಇಸುವನಹಳ್ಳಿ ಚನ್ನಪ್ಪ, ಇಸುವನಹಳ್ಳಿ ಗಂಗಯ್ಯ, ಇಸುವನಹಳ್ಳಿ ಪ್ರಕಾಶ್, ಹಾಲುಪರೀಕ್ಷಕ ಎಸ್.ರಾಜಪ್ಪ, ಅರ್ಚಕ ಕೆ.ನವೀನ್ ಇನ್ನಿತರರಿದ್ದರು.