

ಕುಂದಾಪುರ: ನಮ್ಮ ನಂಬಿಕೆ ಆಧಾರದಲ್ಲಿಯೇ ಸಮಾಜವಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಸಾವಿರಾರು ಕುಟುಂಬಗಳು ಕೈಜೋಡಿಸುತ್ತವೆ. ದೈವಸ್ಥಾನ ಜೀರ್ಣೋದ್ಧಾರ ಕಾರ್ಯ ಊರಿನ ಒಗ್ಗಟ್ಟು, ಶಾಂತಿ ಹಾಗೂ ನೆಮ್ಮದಿ ಪ್ರತೀಕ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಟ್ಬೆಲ್ತೂರಿನ ಶ್ರೀ ಭದ್ರಮಹಾಕಾಳಿ ದೈವಸ್ಥಾನದ ಶ್ರೀ ದೇವಿಯ ರಕ್ತಚಂದನದ ದಾರು ಬಿಂಬದ ಪ್ರತಿಷ್ಠಾಪನೆ ಹಾಗೂ ಸಪರಿವಾರ ದೈವಗಳ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ಅಂಗವಾಗಿ ಶುಕ್ರವಾರ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ದೈವಸ್ಥಾನ ಆಡಳಿತ ಸಮಿತಿ ಗೌರವಾಧ್ಯಕ್ಷ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ, ಮಹಾಲಿಂಗ ನಾಯ್ಕ, ಉದ್ಯಮಿ ನಾಗರಾಜ್ ಪುತ್ರನ್ ಸುಳ್ಸೆ, ಇಲೆಕ್ಟ್ರಿಕಲ್ ಗುತ್ತಿಗೆದಾರ ಕೆ.ಆರ್. ನಾಯ್ಕ ಹಂಗಳೂರು, ದೈವಸ್ಥಾನ ಮೊಕ್ತೇಸರ ಬಿ.ವಿಠಲ ಶೆಟ್ಟಿ, ಉಪಾಧ್ಯಕ್ಷ ಬಿ.ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ಚಂದ್ರ ನಾಯ್ಕ, ನಾಗಯ್ಯ ಶೆಟ್ರಮನೆಯ ಚಂದ್ರಶೇಖರ ಶೆಟ್ಟಿ, ವಾಸ ಶೆಟ್ರಮನೆಯ ಗೋಪಾಲ ಶೆಟ್ಟಿ, ಅಮ್ಮನವರ ಪಾತ್ರಿ ಗೋವಿಂದ ಪೂಜಾರಿ, ಅರ್ಚಕ ದೊಟ್ಟ ಪೂಜಾರಿ, ಜೋಗಿ ಕುಟುಂಬಸ್ಥ ಶೇಖರ್ ಬಳೆಗಾರ್, ಮೂರು ಮನೆಯವರು, ಮೂರು ಗ್ರಾಮಸ್ಥರು, ಆಡಳಿತ, ಉತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಡಳಿತ ಸಮಿತಿ ಅಧ್ಯಕ್ಷ ಕೆ.ಆನಂದ ಶೆಟ್ಟಿ ಸ್ವಾಗತಿಸಿದರು. ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಕೆರೆಮನೆ ಸಮ್ಮಾನ ಪತ್ರ ವಾಚಿಸಿದರು.
ದಾರುಬಿಂಬ ನಿರ್ಮಿಸಿದ ರಥಶಿಲ್ಪಿ ರಾಜಗೋಪಾಲ ಆಚಾರ್ಯ, ದೈವಸ್ಥಾನದ ಹಾಗುಳಿ ಪಾತ್ರಿ ರವಿ ನಾಯ್ಕ, ರವೀಂದ್ರ ಶೆಟ್ಟಿ, ಗಣೇಶ್ ಕುದ್ರು, ಇಂಜಿನಿಯರ್ ಸತೀಶ್ ಪೂಜಾರಿ, ರಾಘವೇಂದ್ರ ಶೆಟ್ಟಿ, ಅವರನ್ನು ಗೌರವಿಸಲಾಯಿತು. ರಾಷ್ಟ್ರೀಯ ವೇಯ್ಟಲಿಫ್ಟರ್ ಗುರುರಾಜ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.