

ಎಚ್.ಡಿ.ಕೋಟೆ: ತಾಲೂಕಿನ ಗೆಂಡತ್ತೂರು ಗ್ರಾಮದಲ್ಲಿ ಭಾನುವಾರ ನಡೆದ ಭಾವಂದಿರು ಹಾಗೂ ಬಾಮೈದನ ನಡುವೆ ಗಲಾಟೆ ನಡೆದಿದ್ದು, ಈ ಪೈಕಿ ಒಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಭಾವನಿಗೆ ಎಡಗೈ ಮುರಿದಿದೆ.
ಗೆಂಡತ್ತೂರು ಗ್ರಾಮದ ನಿವಾಸಿ ಗೋವಿಂದ (53) ಮೃತಪಟ್ಟವ. ಗೋವಿಂದ, ಮಣಿಯ ಹಾಗೂ ಇವರ ಬಾಮೈದ ಕೃಷ್ಣ ಗೆಂಡತ್ತೂರು ಗ್ರಾಮದ ನಿವಾಸಿಗಳಾಗಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಯನನ್ನು ಶನಿವಾರ ಕೋಟೆಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಚಿಕಿತ್ಸೆ ಪಡೆದ ನಂತರ ಮಣಿಯನನ್ನು ಮನೆಗೆ ಕರೆತರಲಾಗಿತ್ತು. ಈ ನಡುವೆ ವೈಯಕ್ತಿಕ ವಿಚಾರಕ್ಕೆ ಮಣಿಯ ಹಾಗೂ ಕೃಷ್ಣನ ನಡುವೆ ಜಗಳ ಏರ್ಪಟ್ಟಿದೆ. ವಿಷಯ ತಿಳಿದು ಗೋವಿಂದ ಮಧ್ಯ ಪ್ರವೇಶಿಸಿದ್ದು, ಗಲಾಟೆ ತಾರಕಕ್ಕೇರಿ ಕೃಷ್ಣ ಗೋವಿಂದನ ದೊಣ್ಣೆಯಿಂದ ಹೊಡೆದರೆ, ಮಣಿಯನಿಗೆ ಎಡಗೈಗೆ ಹೊಡೆದಿದ್ದಾನೆ. ಘಟನೆ ಬಳಿಕ ಗೋವಿಂದ ಹಾಗೂ ಮಣಿಯನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಗೋವಿಂದ ಮೃತಪಟ್ಟಿದ್ದಾರೆ. ಅಂತರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.