ಅಸುನೀಗಿದ ಚವಡಳ್ಳಿ ಹೋರಿ ‘ಕರಿನಾಗ’

MND KARINAGA
Published on

ಮುಂಡಗೋಡ: ರಾಜ್ಯ ಮಟ್ಟದ ದನ ಬೆದರಿಸುವ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದ ‘ಕರಿನಾಗ’ ಎಂದು ಪ್ರಸಿದ್ಧಿ ಹೊಂದಿದ್ದ ಹೋರಿ ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಭಾನುವಾರ ಸಾವನ್ನಪ್ಪಿದ್ದು, ಹೋರಿ ಅಭಿಮಾನಿಗಳಿಗೆ ನೋವುಂಟು ಮಾಡಿದೆ.

ಚವಡಳ್ಳಿ ಗ್ರಾಮದ ಮಹೇಶ ವಾಲ್ಮೀಕಿಯವರ ಹೋರಿಯೇ ಸಾವನ್ನಪ್ಪಿದೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ದನ ಬೆದರಿಸುವ ಸ್ಪರ್ಧೆಗಳಲ್ಲಿ ಕರಿನಾಗ ಸಾಧನೆ ಮಾಡುವ ಮೂಲಕ ನೂರಾರು ಬಹುಮಾನಗಳನ್ನು ಗೆಲ್ಲುವ ಮೂಲಕ ತನ್ನದೆ ಆದ ಅಭಿಮಾನಿ ಬಳಗ ಹೊಂದಿತ್ತು. ಸಾವನ್ನಪ್ಪಿರುವ ಹೋರಿ ಕರಿನಾಗನನ್ನು ಗ್ರಾಮದ ತುಂಬ ಟ್ರ್ಯಾಕ್ಟರ್​ನಲ್ಲಿ ಮೆರವಣಿಗೆ ನಡೆಸುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net