ಗುರುಗಳ ಋಣ ತೀರಿಸಲಾಗದು

11NDR1
Published on

ನಂದೇಶ್ವರ: ಹೆತ್ತ ತಾಯಿ, ಹೊತ್ತ್ತ ಭೂಮಿ, ವಿದ್ಯೆ ನೀಡಿದ ಗುರುಗಳ ಋಣ ಎಂದಿಗೂ ತೀರಿಸಲಾಗದು. ಜೀವನದಲ್ಲಿ ಎಷ್ಟೇ ಉನ್ನತ ಸಾಧನೆ ಮಾಡಿದರೂ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ಜಮಖಂಡಿ ಓಲೇಮಠದ ಆನಂದ ದೇವರು ಹೇಳಿದರು.

ಸಮೀಪದ ಸತ್ತಿ ಗ್ರಾಮದ ಜಿಎನ್‌ಕೆ ಪ್ರೌಢಶಾಲೆಯಲ್ಲಿ ಭಾನುವಾರ 2017-18ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ನಿವೃತ್ತರಾದ ಐ.ಎಂ.ದೊಡಮನಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರೆ ಮಾಜಿ ಎಂದು ಕರೆಯುತ್ತಾರೆ. ಆದರೆ ಶಿಕ್ಷಕರಾದವರಿಗೆ ಮಾಜಿ ಶಿಕ್ಷಕರೆಂದು ಕರೆಯುವುದಿಲ್ಲ. ಐ.ಎಂ.ದೊಡ್ಡಮನಿ ಅವರು ಆದರ್ಶ ಶಿಕ್ಷಕರಾಗಿ ಸಾವಿರಾರು ಮಕ್ಕಳಿಗೆ ದಾರಿ ದೀಪವಾಗಿದ್ದಾರೆ ಎಂದರು.

ನಿವೃತ್ತ ಶಿಕ್ಷಕ ಐ.ಎಂ.ದೊಡಮನಿ ಮಾತನಾಡಿದರು. ವಿದ್ಯಾ ವರ್ಧಕ ಸಮಿತಿ ಉಪಾಧ್ಯಕ್ಷ ಡಾ.ಶ್ರೀವತ್ಸ ಕುಲಕರ್ಣಿ ಮಾತನಾಡಿದರು. ಶಿಕ್ಷಣ ಕ್ಷೇತ್ರ ಸಮನ್ವಯಾಧಿಕಾರಿ ಗೌಡಪ್ಪ ಖೋತ, ಬಸನಗೌಡ ಪಾಟೀಲ, ಎಸ್.ಕೆ.ಕುಂಬಾರ, ಆನಂದ ಕುಲಕರ್ಣಿ, ಮಲ್ಲಪ್ಪ ಹಂಚಿನಾಳ, ರವಿ ಬಸಗೌಡರ, ಎಂ.ಡಿ.ಹೂನ್ನೂರ, ಹರೀಶ ಕುಲಕರ್ಣಿ, ಬಿ.ಎಲ್.ದೊಡಮನಿ, ಶಂಕರ ಜಗದೇವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net