ಜನ್ಮದಾತರ ಋಣ ಬಹುದೊಡ್ಡದು

The debt of birth is huge
ಕೊಲ್ಹಾರ ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಯಲ್ಲಮ್ಮದೇವಿ ಸಿಬಿಎಸ್‌ಸಿ ಶಾಲೆಯ ಮಕ್ಕಳಿಂದ ತಂದೆ-ತಾಯಿಗಳಿಗೆ ಪಾದಪೂಜೆ ನೆರವೇರಿಸಲಾಯಿತು.
Published on

ಕೊಲ್ಹಾರ: ಮಕ್ಕಳಿಗೆ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ಆಗು ಹೋಗುಗಳ ಕುರಿತು ಮತ್ತು ಇಂದಿನ ರಾಜಕೀಯ ವ್ಯವಸ್ಥೆಯ ಪ್ರಚಲಿತ ವಿದ್ಯಮಾನಗಳ ವಿವರಣೆಯನ್ನು ಪಾಠದ ಜತೆಗೆ ಶಿಕ್ಷಕರು ಬೋಧಿಸಿದರೆ, ಮಕ್ಕಳು ಹೆಚ್ಚಿನ ಜ್ಞಾನಾರ್ಜನೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಾಗಲಕೋಟೆ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಸುರೇಶ ಹೆಗಡೆ ಹೇಳಿದರು.

ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಯಲ್ಲಮ್ಮದೇವಿ ಸಿಬಿಎಸ್‌ಸಿ ಶಾಲೆಯ ಮಕ್ಕಳಿಂದ ತಂದೆ-ತಾಯಿಗಳ ಪಾದಪೂಜೆ, ವಿಷಯವಾರು ಹಾಗೂ ವಿಜ್ಞಾನ ತಂತ್ರಜ್ಞಾನದ ಕುರಿತು ಮಕ್ಕಳು ರಚಿಸಿದ ವಸ್ತು ಪ್ರದರ್ಶನ, ಸ್ವಾಮಿ ವಿವೇಕಾನಂದ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜನ್ಮ ಕೊಟ್ಟ ತಂದೆ ತಾಯಿಗಳ ಋಣವನ್ನು ತೀರಿಸಲು ಯಾವ ಕಾಲಕ್ಕೂ ಸಾಧ್ಯವಾಗುವುದಿಲ್ಲ. ಅವರ ಸೇವೆಯನ್ನು ಪಾದಪೂಜೆಯಂತಹ ಸಂಸ್ಕಾರಯುತ ಸಂಸ್ಕೃತಿಯನ್ನು ತೋರಿಸಿಕೊಡುವ ಇಂಥ ಕಾರ್ಯಕ್ರಮಗಳಿಂದ ಸ್ವಲ್ಪ ಮಟ್ಟಿಗಾದರೂ ಜನ್ಮದಾತರಿಗೆ ಕೃತಜ್ಞತೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.

ರೋಣಿಹಾಳ ಹಿರೇಮಠದ ರಾಜಶೇಖರಯ್ಯ ಹಿರೇಮಠ, ಬಳೂತಿಯ ಶಂಕ್ರಯ್ಯ ಚಿಕ್ಕಮಠ ಸಾನ್ನಿಧ್ಯ ವಹಿಸಿದ್ದರು. ಈರಪ್ಪ ಬಾಟಿ, ನೀಲಮ್ಮ ಬೆಳ್ಳುಬ್ಬಿ, ಸವಿತಾ ಬೆಳ್ಳುಬ್ಬಿ, ಸಾವಿತ್ರಿ ಮೇತ್ರಿ, ಬಸವರಾಜ ಸಜ್ಜನ, ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಸ್. ನಿಂಬಾಳ್ಕರ ಇತರರಿದ್ದರು.

ನಿರ್ಣಾಯಕರಾಗಿ ಶ್ರೀಶೈಲ ಯಡಹಳ್ಳಿ, ಸಲೀಂ ಡಾಂಗೆ ಶಿಕ್ಷಕರು ಭಾಗವಹಿಸಿದ್ದರು. ಪೂಜಾ ಬಾಟಿ ನಿರೂಪಿಸಿದರು. ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು. ಮಕ್ಕಳಿಂದ ಪಾಲಕರಿಗೆ ಪಾದಪೂಜೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net