

ಆಸ್ಪತ್ರೆ ಎದುರು ಸಂಬಂಧಿಕರ ಪ್ರತಿಭಟನೆ
ಹೊಸಪೇಟೆ: ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷö್ಯದಿಂದ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮಂಗಳವಾರ ರಾತ್ರಿ ಆಸ್ಪತ್ರೆ ಎದುರು ನೂರಾರು ಸಂಖ್ಯೆಯಲ್ಲಿ ಮೃತನ ಸಂಬAಧಿಕರು ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ತಾಲೂಕಿನ ಕಲ್ಲಹಳ್ಳಿ ತಾಂಡಾದ ಯುವಕ ಸುನಿಲ್ ನಾಯ್ಕ್ (೨೫) ಎಂಬುವವರು ಪ್ಯಾಂಕ್ರ‍್ಯಾಟಿಸ್ ನಿಂದ ಬಳಲುತ್ತಿದ್ದು, ಮಂಗಳವಾರ ಬೆಳಗ್ಗೆ ಚಿಕಿತ್ಸೆಗಾಗಿ ಶರಣಂ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನದ ವೇಳೆಗೆ ಶಸ್ತç ಚಿಕಿತ್ಸೆ ಪೂರ್ಣಗೊಂಡಿತ್ತು. ಆನಂತರ ಸುನಿಲ್ ನಾಯ್ಕ ಪ್ರಜ್ಞೆ ತಪ್ಪಿದ್ದ. ಈ ಬಗ್ಗೆ ವೈದ್ಯರ ಗಮನ ಸೆಳೆದಾಗ ಬಿಪಿ ಕಡಿಮೆಯಾಗಿದೆ ನಾನು ಪ್ರಯತ್ನಿಸುತ್ತೇನೆ ಎನ್ನುತ್ತಲೇ ಕಾಲಹರಣ ಮಾಡಿ, ರಾತ್ರಿ ೮.೧೫ಕ್ಕೆ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ವೈದ್ಯರ ನಿರ್ಲಕ್ಷö್ಯವೇ ಸಾವಿಗೆ ಕಾರಣ. ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮೃತನ ಕುಟುಂಬಸ್ಥರು ಆಗ್ರಹಿಸಿದರು.
ಘಟನೆ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಆಸ್ಪತ್ರೆ ಎದುರು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಕೆಲವರು ಆಸ್ಪತ್ರೆಗೆ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ಕೊಂಚ ಬಿಗಡಾಯಿಸಿತಾದರೂ, ಸ್ಥಳದಲ್ಲಿದ್ದ ಪೊಲೀಸರು ಉದ್ರಿಕ್ತರನ್ನು ನಿಯಂತ್ರಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯ ಡಾ.ವಿನಯ್ ರಾಘವೇಂದ್ರ, ಸುನಿಲ್ ನಾಯ್ಕ ಮೂರು ತಿಂಗಳಿನಿAದ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಯುವಕನಿಗೆ ಮೇದೋಜೀರಕ ಗ್ರಂಥಿಯ ಸಮಸ್ಯೆ ಇತ್ತು. ಪಕ್ಕೆಯಲ್ಲಿ ರಕ್ತಹೆಪ್ಪುಗಟ್ಟಿದ್ದಕ್ಕೆ ಶಸ್ತçಚಿಕಿತ್ಸೆ ನಡೆಸಲಾಗಿತ್ತು. ಸಂಜೆ ೬ ಗಂಟೆಯ ಹೊತ್ತಿಗೆ ಕಡಿಮೆ ರಕ್ತದೊತ್ತಡ ಕಂಡುಬAತು. ಆಗಲೂ ಎಲ್ಲಾ ಪ್ರಯತ್ನವನ್ನೂ ಮಾಡಿದ್ದೆವು. ರಾತ್ರಿ ೮ ಗಂಟೆ ಹೊತ್ತಿಗೆ ಮೃತಪಟ್ಟಿದ್ದಾನೆ. ನಿನ್ನೆಯಿಂದ ಆತನ ಜತೆಗೆ ನಾನು ಇದ್ದು, ಚಿಕಿತ್ಸೆ ನೀಡಿದ್ದೇನೆ. ನಮ್ಮಿಂದ ಯಾವುದೇ ನಿರ್ಲಕ್ಷವಾಗಿಲ್ಲ. ಯಾವುದೇ ತನಿಖೆಗೂ ನಾವು ಸಿದ್ಧ ಎಂದರು.