

ಭಟ್ಕಳ: ತಾಲೂಕಿನ ಮುರ್ಡೆಶ್ವರ ಕಡಲ ತೀರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಬಾಲಕನೊಬ್ಬ ಸೋಮವಾರ ಮೃತಪಟ್ಟಿದ್ದಾನೆ.
ಬೆಂಗಳೂರಿನ ಬಿದರಳ್ಳಿಯ ನಿವಾಸಿ ಕೃತಿಕ್ (8) ಮೃತಪಟ್ಟ ಬಾಲಕ.
ಭಾನುವಾರ ರಾತ್ರಿ ಬೆಂಗಳೂರಿನಿಂದ ಮುರ್ಡೆಶ್ವರಕ್ಕೆ ಪ್ರವಾಸಕ್ಕೆ ಇವರ ಕುಟುಂಬ ಬಂದಿತ್ತು. ಸೋಮವಾರ ಬೆಳಗ್ಗೆ ದೇವಸ್ಥಾನದ ಎಡಬದಿಯ ಕಡಲ ತೀರದಲ್ಲಿ ಆಡುತ್ತಿದ್ದಾಗ ಭಾರಿ ಅಲೆಗಳು ಅಪ್ಪಳಿಸಿದ್ದರಿಂದ ಬಾಲಕ ಕೃತಿಕ್ ಮೃತಪಟ್ಟಿದ್ದು, ಸಮೀಪದಲ್ಲಿದ್ದ ವಸಂತಾ ಕೆ. (27) ಅವರಿಗೆ ಅಲೆ ಅಪ್ಪಳಿಸಿದ್ದರಿಂದ ಅಸ್ವಸ್ಥರಾಗಿ ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುರ್ಡೆಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.