

ಕಡೂರು: ವಾಹನಗಳ ಕಳವು ಸೇರಿದಂತೆ ಅಕ್ರಮಗಳ ತಡೆಗೆ ವಾಹನ ಮಾಲೀಕರು ಕಡ್ಡಾಯವಾಗಿ ವಾಹನಗಳ ನೊಂದಣಿ ಸಂಖ್ಯೆಯನ್ನು ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‌ಗೆ ಬದಲಾಯಿಸಿಕೊಳ್ಳಬೇಕಿದೆ. ಇತರೆ ನಂಬರ್ ಪ್ಲೇಟ್‌ಗಳು ಇನ್ನು ಅನಧಿಕೃತವಾಗಲಿದೆ.
ನವೆಂಬರ್ 17ರ ಬಳಿಕ ಸ್ಟೀಕರ್‌ಗಳಲ್ಲಿ ಬರೆಸಿರುವ ವಾಹನಗಳ ನೋಂದಣಿ ಸಂಖ್ಯೆ ಮಾನ್ಯವಾಗುವುದಿಲ್ಲ. 2019ರ ಏಪ್ರಿಲ್ ಹಿಂದಿನ ಸಾಲಿನಲ್ಲಿ ಖರೀದಿಯಾದ ಎಲ್ಲ ವಾಹನಗಳ ಮಾಲೀಕರು ತಮ್ಮ ವಾಹನ ನೊಂದಣಿ ಸಂಖ್ಯೆಯನ್ನು ಎಚ್‌ಎಸ್‌ಆರ್‌ಪಿ ಪ್ಲೇಟ್‌ನಲ್ಲೇ ಬರೆಸಬೇಕಿದೆ. ತಪ್ಪಿದರೆ ದಂಡ ಪಾವತಿಸಬೇಕಾಗುತ್ತದೆ. ಜತೆಗೆ ಆರ್‌ಟಿಒ ಕಚೇರಿಗಳಲ್ಲಿ ವಾಹನಗಳ ಸಂಬಂಧ ಅಗತ್ಯ ದಾಖಲೆಗಳ ನವೀಕರಣ, ವರ್ಗಾವಣೆ ಸೇರಿದಂತೆ ಯಾವುದೇ ಪ್ರಕ್ರಿಯೆಗಳು ನಡೆಯುವುದಿಲ್ಲ. ಆದ್ದರಿಂದ ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಾಗಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಸಬೇಕು.
ಏನಿದು ಎಚ್‌ಎಸ್‌ಆರ್‌ಪಿ ಪ್ಲೇಟ್?: ಎಚ್‌ಎಸ್‌ಆರ್‌ಪಿ ವಾಹನಗಳ ನೋಂದಣಿ ಹೊಸ ಮಾದರಿ ನಂಬರ್ ಪ್ಲೇಟ್ ಆಗಿದ್ದು, 20*20 ಎಂಎಂ ಗಾತ್ರದಲ್ಲಿ ಹಾಟ್ ಸ್ಟಾಂಪಿಂಗ್ ಮೂಲಕ ಲಗತ್ತಿಸಲಾಗುತ್ತದೆ. ರಾಜ್ಯದಲ್ಲಿ ಎಚ್‌ಎಸ್‌ಆರ್‌ಪಿ ಪಡೆಯಲು ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಬುಕ್ ಮೈ ಎಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಿ ಮಾಹಿತಿ ಭರ್ತಿ ಮಾಡಬೇಕು. ನಂತರ ವಾಹನ ಮಾಲೀಕರು ವಾಹನ ಖರೀದಿ ಮಾಡಿದ ಡೀಲರ್‌ನ ಲೋಕೆಷನ್ ನೋಂದಾಯಿಸಬೇಕು. ಇದಕ್ಕೆ ಸಂಬಂಧಪಟ್ಟ ಶುಲ್ಕವನ್ನು ಆನಲೈನ್ ಮೂಲಕ ಪಾವತಿಸಬೇಕು. ನಂತರ ವಾಹನ ಮಾಲೀಕರ ಮೊಬೈಲ್ ನಂಬರ್‌ಗೆ ಒಟಿಪಿ ಬರಲಿದೆ. ನಿಗದಿ ಮಾಡಿದ ದಿನಕ್ಕೆ ಡೀಲರ್ ಸಮೀಪ ಹೋಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಪಡೆಯಬಹುದಾಗಿದೆ.