

ಮುಂಡಗೋಡ: ಮಳಗಿ ಧರ್ವ ಜಲಾಶಯದ ಕೋಡಿ ಹರಿಯುವ ಸ್ಥಳದಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ಕೊಚ್ಚಿಕೊಂಡು ಹೋಗಿದ್ದ ಯುವಕನ ಮೃತದೇಹ ಗುರುವಾರ ಪತ್ತೆಯಾಗಿದೆ.
ತಾಲೂಕಿನ ಮುಡಸಾಲಿ ಗ್ರಾಮದ ಶ್ರೀಕಾಂತ ಹರಿಜನ (20) ಮೃತಪಟ್ಟ ಯುವಕ.
ಧರ್ವ ಜಲಾಶಯದ ಕೋಡಿ ಹರಿಯುವ ಸ್ಥಳದಲ್ಲಿ ಬುಧವಾರ ಈಜಲು ಇಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ. ನಿನ್ನೆಯಿಂದ ಸ್ಥಳೀಯರು ಹುಡುಕಾಟ ನಡೆಸಿದ್ದರು. ಗುರುವಾರ ಮಧ್ಯಾಹ್ನದ ವೇಳೆಗೆ ಶ್ರೀಕಾಂತನ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಬಂಧ: ಜಲಾಶಯ ಭರ್ತಿಯಾಗಿ ಕೋಡಿ ನೀರು ತುಂಬಾ ರಭಸದಿಂದ ಹರಿಯುತ್ತಿರುವ ಪರಿಣಾಮ ಜಲಾಶಯ ವೀಕ್ಷಣೆಯನ್ನು ನಿರ್ಬಂಧಿಸಿ ತಹಸೀಲ್ದಾರ್ ಆದೇಶ ಹೊರಡಿಸಿದ್ದಾರೆ.