ಇನ್ನೂ ಬಾರದ ಅಚ್ಛೇ ದಿನ್​..!

The day that has not come yet..!
ಕುದರಿ ಸಾಲವಾಡಗಿ ಗ್ರಾಮದಲ್ಲಿ ಹಮ್ಮಿಕೊಂಡ ಕಾಂಗ್ರೆಸ್​ ಕಾರ್ಯಕರ್ತರ ಸಭೆಯನ್ನು ಸಚಿವ ಡಾ. ಎಂ.ಬಿ. ಪಾಟೀಲ ಉದ್ಘಾಟಿಸಿದರು. ಕಾಂಗ್ರೆಸ್​ ಅಭ್ಯರ್ಥಿ ಪ್ರೊ. ರಾಜು ಆಲಗೂರ, ಮುದ್ದೇಬಿಹಾಳ ಶಾಸಕ ಸಿ.ಎಸ್​. ನಾಡಗೌಡ, ವಿಪ ಸದಸ್ಯ ಸುನೀಲಗೌಡ ಪಾಟೀಲ, ಡಾ. ಪ್ರಭುಗೌಡ ಲಿಂಗದಳ್ಳಿ ಇತರರಿದ್ದಾರೆ.
Published on

ಹೂವಿನಹಿಪ್ಪರಗಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರದಲ್ಲಿ ಆಡಳಿತ ನಡೆಸಿದರೂ ನಿರುದ್ಯೋಗ ಸಮಸ್ಯೆ ನಿವಾರಣೆ, ರೈತರ ಅಭಿವೃದ್ಧಿಯ ಭರವಸೆಗಳನ್ನು ನನಸು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಶನಿವಾರ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ಶಾದಿಮಹಲ್​ನಲ್ಲಿ ಹಮ್ಮಿಕೊಂಡಿದ್ದ ಲೋಕಸಭೆ ಕಾಂಗ್ರೆಸ್​ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಧಿಕಾರ ಹಿಡಿದಾಗಿನಿಂದಲೂ ಬರೀ "ಅಚ್ಛೇ ದಿನ್​ ಆಯೇಗಾ' ಎಂದು ಹೇಳುತ್ತಲೇ ಇದ್ದಾರೆ.

ನ ದಲಿತರ ಅಭಿವೃದ್ಧಿಗೆ ಯಾವುದೇ ಯೋಜನೆ ರೂಪಿಸದೆ ಡೀಸೆಲ್​, ಪೆಟ್ರೋಲ್​, ಗ್ಯಾಸ್​ ಕಿರಾಣಿ ಸಾಮಗ್ರಗಿಗಳ ದರ ಏರಿಕೆಯಾಗುವಂತೆ ಮಾಡಿ ಬಡಜನರ ಹೊಟ್ಟೆಯ ಮೇಲೆ ಬರೆ ಎಳೆದು ಶ್ರೀಮಂತ ಉದ್ಯಮಿಗಳಿಗೆ ಉಪಯುಕ್ತವಾದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್​ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದೆ. ತದ ನಂತರ ದೇಶದ ಅಭಿವೃದ್ಧಿ ಪರ ಯೋಜನೆಗಳನ್ನು ರೂಪಿಸಿದೆ. ದೇಶದಲ್ಲಿರುವ ದೊಡ್ಡ, ದೊಡ್ಡ ಬ್ರಿಡ್ಜ್​ಗಳನ್ನು ಕಟ್ಟಿದ.

ಆದರೆ ಮೋದಿಯವರು ನಮ್ಮ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತಮ್ಮದೆಂದು ಬೆಂಬಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ದೇಶದ ಸರ್ವಾಂಗೀಣ ಅಭಿವೃದ್ಧಿ, ಪ್ರಜಾಪ್ರಭುತ್ವ ಉಳಿವಿಗೆ ಕಾಂಗ್ರೆಸ್​ಗೆ ಮತ ನೀಡುವ ಮೂಲಕ ಮತದಾರರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್​ ಅಭ್ಯರ್ಥಿ ಪ್ರೊ. ರಾಜು ಆಲಗೂರ, ಶಾಸಕ ಸಿ.ಎಸ್​. ನಾಡಗೌಡ, ವಿ.ಪ. ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಶಾಸಕ ಶರಣಪ್ಪ ಸುಣಗಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ, ಮಹಿಳಾ ಟಕ ಅಧ್ಯಕ್ಷ ರಮೀಜಾ ನದಾಫ್​ ಮಾತನಾಡಿದರು.

ರಾಜ್ಯ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಆನಂದಗೌಡ ದೊಡಮನಿ, ಬಿ.ಎಸ್​. ಪಾಟೀಲ ಯಾಳಗಿ, ಸುಭಾಷ ಛಾಯಾಗೋಳ, ಕಾಂತಾ ನಾಯಕ, ಗೌರಮ್ಮ ಮುತ್ತತ್ತಿ, ಅಶೋಕಗೌಡ ಪಾಟೀಲ, ಕುದರಿ ಸಾಲವಾಡಗಿ, ಮಾಜಿ ಜಿ.ಪಂ. ಸದಸ್ಯ ಶಿವಾನಂದ ದೇಸಾಯಿ, ಕಲ್ಲಪ್ಪ ಮಟ್ಟಿ, ಬಸವರಾಜ ದೇಸಾಯಿ, ಬಶೀರಸೇಠ ಬೇಾರಿ, ಬಾಳಾಸಾಹೇಬಗೌಡ ಪಾಟೀಲ ಇತರರಿದ್ದರು. ಹಲವು ಜೆಡಿಎಸ್​ನ ಮುಖಂಡರು ಸಚಿವ ಎಂ.ಬಿ. ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net